Select Your Language

Notifications

webdunia
webdunia
webdunia
webdunia

ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತರ ಬಂಧನ

ನಕಲಿ ಪರ್ತಕರ್ತರು
ಧಾರವಾಡ , ಶುಕ್ರವಾರ, 24 ಏಪ್ರಿಲ್ 2020 (14:18 IST)
ಪತ್ರಕರ್ತರು ಎಂದು ಹೇಳಿಕೊಂಡು ಸಂಸ್ಥೆಯ ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪತ್ರಕರ್ತರಿಬ್ಬರನ್ನು ಬಂಧನ ಮಾಡಲಾಗಿದೆ.

ಧಾರವಾಡದ ಬೇಲೂರು ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಬಿಎಂಎನ್ ಅಗ್ರೋ ಫುಡ್ಸ್ ಸಂಸ್ಥೆಗೆ ಭೇಟಿ ನೀಡಿದವರು ತಾವು ಪತ್ರಕರ್ತರು ಎಂದು ಹೇಳಿಕೊಂಡು  ಬೆದರಿಕೆ ಒಡ್ಡಿದ್ದರು. 25 ಸಾವಿರ ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಜೆಕೆ 24x7 ನ್ಯೂಸ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ಅನ್ವರ್ ಕೆ.ಜಮಾದಾರ ಹಾಗೂ ಜೆಎಂ ಆರ್ ಚಾನೆಲ್ ವರದಿಗಾರ ಎಂದು ಹೇಳಿಕೊಂಡ ನಿಝಾಮ್ ಅಬ್ದುಲ್ ಸಾಬ್ ಪಟೇಲ್  ಗುರುತಿನ ಚೀಟಿ ತೋರಿಸಿ , ಉದ್ಯಮ ಸಂಸ್ಥೆಗೆ ಬೆದರಿಕೆ ಹಾಕಿದ್ದರು. 25 ಸಾವಿರ ರೂ.ಗಳ ಹಣದ ಬೇಡಿಕೆ  ಇಟ್ಟಿದ್ದರು. ಕೆಎ 22- ಸಿ - 3636 ಸಂಖ್ಯೆಯ ಕಾರಿನಲ್ಲಿ ಅನುಮತಿಯಿಲ್ಲದೇ ಬೆಳಗಾವಿ ಜಿಲ್ಲೆಯಿಂದ ಧಾರವಾಡದವರೆಗೆ ಪ್ರಯಾಣ ಮಾಡಿದ್ದರು.

ಗರಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಈ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ಪ್ರಮಾಣ ಪತ್ರ ಕೊಟ್ಟು ಬಿಡಿ ಎಂದ ಸರಕಾರ