Publish Date: Fri, 24 Apr 2020 (13:09 IST)
Updated Date: Fri, 24 Apr 2020 (13:10 IST)
ಕೊರೊನಾ ವಾರಿಯರ್ಸ್ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ರಾಮನಗರ ಜೈಲಿನಿಂದ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ.
ಆರೋಪಿಗಳಲ್ಲಿ ಐವರಿಗೆ ಕೊರೊನಾ ವೈರಸ್ ಸೋಂಕು ಇರೋದು ದೃಢಪಟ್ಟಿದೆ. ಹೀಗಾಗಿ ಸೋಂಕಿತರನ್ನು ಆಸ್ಪತ್ರೆಗೆ ಹಾಗೂ ಶಂಕಿತರು ಹಾಗೂ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಹೀಗಂತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕಿಡಿಗೇಡಿಗಳು, ಗಲಭೆ ಕೋರರನ್ನು ಬಂಧಿಸುವಾಗಲೇ ಆರೋಗ್ಯ ಟೆಸ್ಟ್ ಮಾಡಲಾಗಿತ್ತು. ಆಗ ಇಬ್ಬರಲ್ಲಿ ಕೋವಿಡ್ – 19 ಇರೋದು ಗೊತ್ತಾಗಿದೆ. ಇದೀಗ ಉಳಿದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದರು.
ಜೈಲ್ ಸಿಬ್ಬಂದಿ, ಪೊಲೀಸರ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದಿದ್ದಾರೆ.