Select Your Language

Notifications

webdunia
webdunia
webdunia
webdunia

ಚಿನ್ನ ಕೊಳ್ಳೆ ಹೊಡೆಯುತ್ತಿದ್ದ ಖತರ್ನಾಕ್ ಜೋಡಿ ಅರೆಸ್ಟ್

ಚಿನ್ನಾಭರಣ
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (16:03 IST)
ಚಿನ್ನದ ಅಂಗಡಿಗಳಿಂದ ಹೊರಬರುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನ ಕದಿಯುತ್ತಿದ್ದ ಖತರ್ನಾಕ್ ಜೋಡಿಯ ಕೈಗಳಿಗೆ ಕೊಳ ಬಿದ್ದಿವೆ.

ಬೆಂಗಳೂರಿನ ವಿವಿಧೆಡೆ ಇರೋ ಚಿನ್ನಾಭರಣ ಅಂಗಡಿಗಳ ಮುಂದೆ ಅಮಾಯಕರಂತೆ ನಿಲ್ಲುತ್ತಿದ್ದ ದೇವರಾಜ್, ಮಂಜುಳಾ ದಂಪತಿ, ಚಿನ್ನಾಭರಣ ಖರೀದಿಸಿ ಹೊರ ಬರೋರನ್ನು ಗುರಿಯಾಗಿರಿಸಿಕೊಂಡು ಬೆದರಿಸಿ, ಹಲ್ಲೆ ನಡೆಸಿ ದೋಚುತ್ತಿದ್ದರು.

ಮೂಲತಃ ಮೈಸೂರಿನ ನಿವಾಸಿಗಳಾದ ಈ ಜೋಡಿ ಬೆಂಗಳೂರಿನಲ್ಲಿ ಲೆಕ್ಕಕ್ಕೆ ಸಿಗದಷ್ಟು ಸ್ಥಳಗಳಲ್ಲಿ ಜನರನ್ನು ದೋಚಿ ಹೈಟೆಕ್ ಜೀವನ ಸಾಗಿಸ್ತಿದ್ದರು.

ಬಂಧಿತರಿಂದ ಆರೇಳು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕೋಣನಕುಂಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯಾ ಕೇಸ್ – ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ