Publish Date: Mon, 16 Dec 2019 (19:09 IST)
Updated Date: Mon, 16 Dec 2019 (19:11 IST)
ನಕಲಿ ಅಯ್ಯಪ್ಪ ಸ್ವಾಮಿ ವೇಷಾಧಾರಿಗಳು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ.
ನಕಲಿ ಅಯ್ಯಪ್ಪ ಸ್ವಾಮಿ ಭಕ್ತರು ವೇಷಹಾಕಿಕೊಂಡು ರೈತ ಬೆಳೆದ ಸುಮಾರು ಒಂದು ಲಕ್ಷ ಮೌಲ್ಯದ ಬಾಳೆಗಿಡ ಕಡೆದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ರೈತ ರಾಯಪ್ಪ ಮಲ್ಲಪ್ಪ ಸುಳ್ಳದ ಎಂಬುವವರ ಹೊಲದಲ್ಲಿ ಬಾಳೆ ಗಿಡ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಬಾಳೆ ಗಿಡವನ್ನು ಕಡಿದು 500 ಬಾಳೆಗೋಣೆ ಹಾಗೂ 500 ಬಾಳೆಗಿಡ ಕಡಿದು ಟಾಟಾ ಎಸಿ ಯಲ್ಲಿ ಕದ್ದು ಒಯ್ದಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.