Publish Date: Mon, 16 Dec 2019 (18:41 IST)
Updated Date: Mon, 16 Dec 2019 (18:55 IST)
ರಾಜನೂ...ರಾಣಿಯೂ... ಹಳ್ಳಿ ಕಥೆ ಹೊಂದಿರುವ ಸಿನಿಮಾ ಚಿತ್ರಿಕರಣ ಶುರುವಾಗಲು ಮುಹೂರ್ತ ನಿಗದಿಯಾಗಿದೆ.
ಶ್ರೀ ಆದಿಶಕ್ತಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ ರಾಜನೂ...ರಾಣಿಯೂ... ಹಳ್ಳಿ ಕಥೆ ಹೊಂದಿರುವ ಸಿನಿಮಾ ಆಗಿದ್ದು, ಚಿತ್ರವನ್ನು ಸಂಪೂರ್ಣ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಜನವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೀಗಂತ ಚಿತ್ರದ ನಿರ್ದೇಶಕ ರಾಜು ಆಚಾರ್ಯ ಹೇಳಿದ್ದಾರೆ.
ಚಿತ್ರದಲ್ಲಿ ಬೆಳಗಾವಿ ಮೂಲದ (ಸದ್ಯ ಮುಂಬೈ ನಿವಾಸಿ) ಆಮಿ ತಾಯಿ ಮೊಲದ ಬಾರಿಗೆ ನಾಯಕ ನಾಟನಾಗಿ ಅಭಿನಯ ಮಾಡುತ್ತಿದ್ದು, ಬಿಂದು ನಟಿಯಾಗಿದ್ದಾರೆ. ಚಿತ್ರವನ್ನು ರಾಜು ಆಚಾರ್ಯ ನಿರ್ದೇಶನ ಮಾಡುತ್ತಿದ್ದು, ಮೌನೇಶ್ ಪತ್ತಾರ್, ಧೀರಜ್ ಕೋಟೆಕರ್, ಮಹೇಶ ಬಡಿಗೇರ ಹಾಗೂ ವಾಸುರಡ್ಡಿ ಹೆಬ್ಬಾಳ ಚಿತ್ರದ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
ಸಂಗೀತ, ಸಾಹಿತ್ಯ ಕೆ. ಎಂ. ಇಂದ್ರ, ಛಾಯಾಗ್ರಹಣವನ್ಜು ಅಭಿನಂದನ್ ಶೆಟ್ಟಿ, ಸಂಕಲನ ಪ್ರವೀಣ ಚಿದಾನಂದ್ ಹಾಗೂ ಸಹ ನಿರ್ದೇಶಕರಾಗಿ ಇಮಾರ್ ಗೊಂಬನಾಡು ಮತ್ತು ಕನಕಗಿರಿ ಶಿವು ಮಾಡಲಿದ್ದಾರೆ ಅಂತ ಮಾಹಿತಿ ನೀಡಿದ್ರು.