Select Your Language

Notifications

webdunia
webdunia
webdunia
webdunia

ನಡೆದು ಹೋಗುತ್ತಿದ್ದ ಒಂಟಿ ಮಹಿಳೆ ಮೇಲೆ ದುಷ್ಕರ್ಮಿ ಹೀಗೆ ಮಾಡೋದಾ

ನಡೆದು ಹೋಗುತ್ತಿದ್ದ ಒಂಟಿ ಮಹಿಳೆ ಮೇಲೆ ದುಷ್ಕರ್ಮಿ ಹೀಗೆ ಮಾಡೋದಾ
ಬೆಂಗಳೂರು , ಬುಧವಾರ, 11 ಡಿಸೆಂಬರ್ 2019 (18:08 IST)
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ದುಷ್ಕರ್ಮಿಯೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಮಹಿಳೆಯ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಸಿನಿಮೀಯ ರೀತಿಯಲ್ಲಿ ಆಟೋ ಚಾಲಕನೊಬ್ಬ ಚೇಸ್ ಮಾಡಿ ಹಿಡಿದಿರೋ ಘಟನೆ ಮಾರತಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಮಾರತಹಳ್ಳಿಯ ಮಾಕ್ಸ್ ಶೋರೂಮ್ ಮುಂಭಾಗ ಮಹಿಳೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಕೆಜಿ ಹಳ್ಳಿ ನಿವಾಸಿ ವಿಘ್ನೇಶ್ ಎಂಬ ಕಳ್ಳನು ಮಹಿಳೆಯ ಚಿನ್ನದ ಸರಕ್ಕೆ ಹೊಂಚು ಹಾಕಿ ಅಡ್ಡಗಟ್ಟಿ ಚಿನ್ನದ ಸರವನ್ನು ಕಿತ್ತು ಎಸ್ಕೇಪ್ ಆಗುತ್ತಿದ್ದನು.

ಇದೇ ವೇಳೆ ಕಳ್ಳತನದ ದೃಶ್ಯವನ್ನು ಗಮನಿಸಿದ ಆಟೋ ಚಾಲಕ ಹನುಮಂತ ಎಂಬಾತ ಕಳ್ಳನನ್ನು ಹಿಂಬಾಲಿಸಿಕೊಂಡು ಹೋಗಿ ಕಳ್ಳನ ದ್ವಿಚಕ್ರ ವಾಹನಕ್ಕೆ ಆಟೋವನ್ನು ಡಿಕ್ಕಿ ಹೊಡೆಸಿದ್ದಾನೆ. ಆಗ ಮತ್ತೆ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.  ಸ್ಥಳೀಯರು ಕೂಡಲೇ ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ರು. 




Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ ನೀಡಿದ ರೈತ