“ಲವ್ ಯೂ ಪಾಕ್ ಆರ್ಮಿ “ ಎಂದು ಪೋಸ್ಟ್ ಹರಿಬಿಟ್ಟ ಯುವಕ ಅರೆಸ್ಟ್

ಬುಧವಾರ, 26 ಫೆಬ್ರವರಿ 2020 (09:22 IST)
ವಿಜಯಪುರ : ಇತ್ತೀಚೆಗೆ ದೇಶದ್ರೋಹದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ “ಲವ್ ಯೂ ಪಾಕ್ ಆರ್ಮಿ “ ಎಂದು ಪೋಸ್ಟ್ ಹರಿಬಿಟ್ಟ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


ತಾಳಿಕೋಟೆಯ ಮೇರು ಬ್ಯಾಗ್ ವಾಟ್ ಎಂಬ ಯುವಕ ಇಂತಹ ಕೃತ್ಯ ಎಸಗಿದ್ದು, ಎಟೂಝಡ್ ಖಾತೆಯಲ್ಲಿ “ಲವ್ ಯೂ ಪಾಕ್ ಆರ್ಮಿ “ ಎಂದು ಪೋಸ್ಟ್ ಬರೆಯಲಾಗಿದ್ದು, ಈತ ಅದನ್ನು ಶೇರ್ ಮಾಡಿದ್ದಾನೆ.


ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಆರೋಪಿಯನ್ನು ಮುದ್ದೇಬಿಹಾಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೇ ಎಟೂಝಡ್ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತನ್ನ ಮಕ್ಕಳ ಜೊತೆ ಆಟವಾಡಲು ಬಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಿರಾತಕ