ತನ್ನ ಮಕ್ಕಳ ಜೊತೆ ಆಟವಾಡಲು ಬಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಿರಾತಕ

ಬುಧವಾರ, 26 ಫೆಬ್ರವರಿ 2020 (09:19 IST)
ಅಹಮದಾಬಾದ್ : ತನ್ನ ಮಕ್ಕಳ ಜೊತೆ ಆಟವಾಡಲು ಬಂದ ಬಾಲಕಿಯ ಬಳಿ ವ್ಯಕ್ತಿಯೊಬ್ಬ ತನ್ನ ಜೊತೆ ಆಟವಾಡು ಎಂದು ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.


40 ವರ್ಷದ ವ್ಯಕ್ತಿಯೊಬ್ಬನಿಗೆ ಇಬ್ಬರು ಮಕ್ಕಳಿದ್ದು, ಪಕ್ಕದಮನೆಯ ಬಾಲಕಿಯೊಬ್ಬಳು ಆ ಮಕ್ಕಳ ಜೊತೆ ಆಟವಾಡಲು ಈತನ ಮನೆಗೆ ಬರುತ್ತಿದ್ದಳು. ಭಾನುವಾರದಂದು ಕೂಡ ಬಾಲಕಿ ಈತನ ಮನೆಗೆ ಬಂದು ಮಕ್ಕಳ ಜೊತೆ ಆಟವಾಡುತ್ತಿದ್ದಾಗ, ಆಕೆಯನ್ನು ಕರೆದು ಸ್ವಲ್ಪ ಹೊತ್ತು ನನ್ನ ಜೊತೆ ಆಟವಾಡು ಎಂದು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.


ತನ್ನ ಮನೆಗೆ ಬಂದ ಬಾಲಕಿ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದಾಗ ಆಕೆ ಸ್ಥಳೀಯ ಠಾಣೆಗೆ ದೂರು ನೀಡಿದ್ದಾಳೆ. ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಾಂಪತ್ಯ ಜೀವನಕ್ಕೆ ಚಂದನ್ ಶೆಟ್ಟಿ – ನಿವೇದಿತಾ ಗೌಡ