Select Your Language

Notifications

webdunia
webdunia
webdunia
webdunia

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಕಾಮುಕನಿಗೆ ಬಿತ್ತು ಧರ್ಮದೇಟು

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ; ಕಾಮುಕನಿಗೆ ಬಿತ್ತು ಧರ್ಮದೇಟು
ಕಲಬುರಗಿ , ಮಂಗಳವಾರ, 25 ಫೆಬ್ರವರಿ 2020 (12:19 IST)

ದೇವಸ್ಥಾನಕ್ಕೆ ಎಂದು ಬಂದಿದ್ದ ಭಕ್ತರ ಐದು ವರ್ಷದ ಮಗಳನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಜನರು ಸರಿಯಾಗೇ ಧರ್ಮದೇಟು ನೀಡಿದ್ದಾರೆ.
 

ಕಲಬುರಗಿ ನಗರದ ಗೋವಾ ಹೋಟೆಲ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಸರ್ಕಲ್ ಪಕ್ಕದಲ್ಲಿರೋ ಕಾಂಪ್ಲೆಕ್ಸ್ ಬಾಲಕಿಯನ್ನು ಕರೆದುಕೊಂಡು ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಬಾಲಕಿ ಕೂಗಾಡಿದ್ದಾಳೆ. ಬಾಲಕಿಯ ಚೀರಾಟ ಕೇಳಿದ ಸ್ಥಳೀಯರು ಕಾಮುಕನನ್ನು ಹಿಡಿದು ಕಂಬಕ್ಕೆ ಕಟ್ಟಿದ್ದಾರೆ. ಆ ಬಳಿಕ ಹಿಗ್ಗಾಮುಗ್ಗಾ ಥಳಿಸಿ ಬ್ರಹ್ಮಪುರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಬಾಲಕಿಯನ್ನು ಕರೆದುಕೊಂಡು ಪಾಲಕರು ಬಂದಿದ್ದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಉತ್ತರಾಧಿಕಾರಿಯಾಗಲಿ ಎಂದ ಶ್ರೀಶೈಲ ಶ್ರೀ