Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಸೇನಾ ದಿನಾಚರಣೆ

Army Day celebrations in Bangalore
bangalore , ಬುಧವಾರ, 11 ಜನವರಿ 2023 (18:08 IST)
ಜನವರಿ 15 ರಂದು ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಯಿಂದ ಹೊರಗೆ ಅಂದರೆ ಬೆಂಗಳೂರಿನಲ್ಲಿ ಸೇನಾ ದಿನದ ಪರೇಡ್‌ನ್ನು ಆಯೋಜಿಸಲಾಗುತ್ತಿದೆ. ಸೇನಾ ದಿನದ ಪರೇಡ್‌ನ್ನು MEG ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಇದರ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಸೇನಾ ದಿನದಂದು ಸುಮಾರು 500 ಯೋಧರಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ. ಜತೆಗೆ ‘ಟಿ–90’ ಟ್ಯಾಂಕ್‌ಗಳು, 155 ಎಂ.ಎಂ. ಬೊಫೋರ್ಸ್‌ ಗನ್‌ ಸೇರಿದಂತೆ ಸೇನೆಯ ಸಾಮರ್ಥ್ಯ ಬಿಂಬಿಸುವ ವಿವಿಧ ಯುದ್ಧ ಟ್ಯಾಂಕ್‌ಗಳು, ರೇಡಾರ್‌ಗಳ ಪ್ರದರ್ಶನವೂ ನಡೆಯಲಿದೆ. ಜನವರಿ15ರ ಸಂಜೆ ನಡೆಯುವ ‘ಮಿಲಿಟರಿ ಟ್ಯಾಟೂ’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೇ ಹಳಿ ದಾಟಿದ 20ಕ್ಕೂ ಹೆಚ್ಚು ಕಾಡಾನೆ