ಖಾಸಗಿ ಶಾಲೆಗಳ ಗುಂಗಿನಲ್ಲಿ ಪೋಷಕರು ಇದ್ದು, ಅಂಗನವಾಡಿ ಕೇಂದ್ರಗಳು ಅಳಿವಿನಂಚಿನಲ್ಲಿವೆ. ಅಂಗನವಾಡಿ ಸೇರುತ್ತಿರೋ ಮಕ್ಕಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಕೇವಲ ಬಾಣಂತಿಯರ ಹಾಗೂ ಗರ್ಭಿಣಿಯರ ಪೋಷಣಾ ಕೇಂದ್ರವಾಗುತ್ತಿದೆ. ಮಕ್ಕಳಿಲ್ಲದೆ ಅದೆಷ್ಟೋ ಅಂಗನವಾಡಿ ಕೇಂದ್ರಗಳು ಖಾಲಿ ಹೊಡೆಯತ್ತಿವೆ. ಮುರಿದ ಬಾಗಿಲು, ಗೋಡೆ ನೋಡಿ ಪೋಷಕರಿಗೂ ಅಂಗನವಾಡಿ ಕೇಂದ್ರಗಳ ಮೇಲೆ ಭಯ ಶುರುವಾಗಿದೆ. ಹೀಗಾಗಿ ಪೋಷಕರು ಸುಸಜ್ಜಿತ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಆತಂಕ ಹೆಚ್ಚಾಗಿದ್ದು, ಸದೃಢ ಕಟ್ಟಡ ನಿರ್ಮಾಣ ಮಾಡಿಕೊಡಲು ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಾಡುವಂತೆ ಕಾರ್ಯಕರ್ತೆ ಮನವಿ ಮಾಡುತ್ತಿದ್ದಾರೆ.