Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ಅಪ್ಪು ಫ್ಯಾನ್ ಸಾವು

Appu Fan died of heart attack
bangalore , ಶನಿವಾರ, 22 ಅಕ್ಟೋಬರ್ 2022 (15:57 IST)
ನಿನ್ನೆ ಪುನೀತಪರ್ವ ಕಾರ್ಯಕ್ರಮ ನೋಡುವಾಗಲೇ ಅಪ್ಪು ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತ ಪಟ್ಟಿದ್ದಾನೆ. ಬೆಂಗಳೂರಿನ ಮಲ್ಲೇಶ್ವರ ಲಿಂಕ್ ರೋಡ್​​ನಲ್ಲಿ ಈ ಘಟನೆ ನಡೆದಿದೆ. ಗಿರಿರಾಜ ಮೃತಪಟ್ಟ ಅಭಿಮಾನಿಯಾಗಿದ್ದಾನೆ. ಪ್ರತಿ ದಿನ ಅಪ್ಪು ಫೋಟೊಗೆ ಪೂಜೆ ಮಾಡ್ತಿದ್ದ ಈತ, ನಿನ್ನೆ ಪುನೀತಪರ್ವ ಕಾರ್ಯಕ್ರಮ ‌ನೋಡಿ ಬೇಜಾರಾಗಿದ್ದ ಎಂದು ಮನೆಯವರು ತಿಳಿಸಿದ್ದಾರೆ. ಅಪ್ಪು ನೆನಪು ಮಾಡಿಕೊಂಡು ಅತೀವ ಭಾವುಕನಾಗಿದ್ದ ಅಭಿಮಾನಿ ಹೃದಯಾಘಾತಕ್ಕೆ ಒಳಗಾಗಿದ್ದಾನೆ. ರಾತ್ರಿ ಸುಮಾರು‌ 10.30ರ ಹೊತ್ತಿಗೆ ಬಾತ್ ರೂಂಗೆ ಹೋದವನು ಅಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಮಲ್ಲೇಶ್ವರದ K.C.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಬದುಕುಳಿಯಲಿಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ದಸರಾ ಲೆಕ್ಕ ಕೊಡುತ್ತೇನೆ-ಸಚಿವ ಎಸ್.ಟಿ.ಸೋಮಶೇಖರ್