Webdunia - Bharat's app for daily news and videos

Install App

ಅಪ್ಪುಗೆ ನಮಿಸಿ ಮದುವೆಯಾದ ವರ

Webdunia
ಶನಿವಾರ, 30 ಏಪ್ರಿಲ್ 2022 (20:27 IST)
ನಗುವಿನ ಮಾಲೀಕ, ಕನ್ನಡಿಗರ ಮನೆ-ಮನಗಳ ಅಜಾತಶುತ್ರು ಅಪ್ಪು ನಮ್ಮನ್ನ ಅಗಲಿ ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ಮಾತ್ರ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ಇದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆದ ಮದುವೆಯೇ ಜೀವಂತ ಸಾಕ್ಷಿ. ಅಗಲಿದ ನಟನನ್ನ ಹುಟ್ಟುಹಬ್ಬದಂದೋ ಅಥವ ಪುಣ್ಯ ಸ್ಮರಣೆಯ ದಿನವೋ ನೆನೆಪು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೋರ್ವ ತನ್ನ ಮದುವೆಯ ದಿನ ಮಾಂಗಲ್ಯಧಾರಣೆಗೂ ಮುನ್ನ ಅಪ್ಪುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಮಸ್ಕರಿಸಿ ಬಳಿಕ ಮಾಂಗಲ್ಯಧಾರಣೆ ಮಾಡಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ್ ನಿಲಯ್ ಹಾಗೂ ಸುಪ್ರೀಯಾ ಎಂಬುವರ ಮದುವೆ ಸಂದರ್ಭದಲ್ಲಿ ಅಪ್ಪುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಮದುವೆ ಮನೆಯಲ್ಲೂ ಅಪ್ಪುವಿನ ಭಾವಚಿತ್ರ ಹಾಕಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಅಪ್ಪು ಭಾವಚಿತ್ರಕ್ಕೆ ನವದಂಪತಿಗಳು ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿ ನಂತರ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮದುವೆ ಮಂಟಪದ ಎಲ್‍ಇಡಿ ವಾಲ್‍ನಲ್ಲೂ ಸಹ ಅಪ್ಪು ಅಜಾತಶತ್ರುವಾಗಿದ್ದರು. ನವದಂಪತಿಗಳಿಬ್ಬರು ಅಪ್ಪುವಿನ ಅಭಿಮಾನಿಗಳಾಗಿದ್ದರು. ವಿವಾಹದ ಲಗ್ನಪತ್ರಿಕೆಯಲ್ಲೂ ಕೂಡ ತಮ್ಮ ಹೆಸರಿನ ಮುಂದೆ ಅಪ್ಪು ಎಂದು ನಮೂದಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

11ದಿನಗಳಿಂದ ಆಪ್ತ ಸ್ನೇಹಿತೆ ನಾಪತ್ತೆ, ದೂರು ನೀಡಿದಾಗ ಬಯಲಾಯಿತು ಭಯಾನಕ ರಹಸ್ಯ

ಮುಂದಿನ ಸುದ್ದಿ
Show comments