ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶುಕ್ರವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳ ಕೆಲಸವನ್ನು ಪ್ರಶ್ನಿಸಿದ್ದಾರೆ. 200 ಮಂದಿ ಉಗ್ರರನ್ನು ಎದುರಿಸಲಾಗದೆ ಇದ್ದರೆ ಹತ್ತು ಲಕ್ಷ ಭಾರತೀಯ ಸೇನಾ ಪಡೆಗಳು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ನಿರಂತರವಾಗಿ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮೆಹಬೂಬಾ, “ನಮ್ಮ ಹತ್ತು ಲಕ್ಷ ಸೇನೆಯು ಇಲ್ಲಿ ಏನು ಮಾಡುತ್ತಿದೆ? ಅವರು ಕೇವಲ 100-150 ಭಯೋತ್ಪಾದಕರು ಮಾತ್ರ ಸಕ್ರಿಯರಾಗಿದ್ದಾರೆ ಎಂದು ಹೇಳುತ್ತಾರೆ, ಅವರನ್ನು ಎದುರಿಸಲು ಸಾಧ್ಯವಾಗದಿದ್ದರೆ, ಇವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.