Select Your Language

Notifications

webdunia
webdunia
webdunia
webdunia

ಅಪ್ಪು ಸಮಾಧಿಗೆ RGV ಭೇಟಿ

RGV visit to Appu's grave
bangalore , ಮಂಗಳವಾರ, 29 ಮಾರ್ಚ್ 2022 (16:15 IST)
ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 5 ತಿಂಗಳು ಕಳೆದಿದ್ದು, ಐದನೇ ತಿಂಗಳ ಪುಣ್ಯ ತಿಥಿ ಹಿನ್ನಲೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕುಟುಂಬಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.  ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್, ಪುತ್ರಿ ವಂದಿತಾ ರಾಘವೇಂದ್ರ ರಾಜ್‌ಕುಮಾರ್, ಕುಟುಂಬಸ್ಥರಿಂದ ಪೂಜಾ ಕಾರ್ಯ ನೆರವೇರಿದೆ.  ಜೊತೆಗೆ ಟಾಲಿವುಡ್ ಹಾಗೂ ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ಪುನೀತ್ ಸಮಾಧಿಗೆ ಭೇಟಿ ನೀಡಿ, ಪುನೀತ್​ಗೆ ನಮನ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು ‘‘ಪುನೀತ್ ಒಬ್ಬ ಒಳ್ಳೆ ನಟ ಮಾತ್ರ ಅಲ್ಲ. ಒಬ್ಬ ಒಳ್ಳೆ ವ್ಯಕ್ತಿ ಕೂಡ ಆಗಿದ್ದರು. ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದ ಸಮಯದಲ್ಲಿ ಎರಡು ಭಾರಿ ಭೇಟಿಯಾಗಿದ್ದೆ’’ ಎಂದು ನುಡಿದಿದ್ದಾರೆ. ಅಪ್ಪು ಸಮಾಧಿಗೆ ನಮನ ಸಲ್ಲಿಸಿದ ನಂತರ ಪಾರ್ವತಮ್ಮ ರಾಜ್​ಕುಮಾರ್ ಅವರ ಸಮಾಧಿಗೂ ಆರ್​ಜಿವಿ ನಮನ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ 1ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಿರಿಯ ನಾಯಕರ ಸಭೆ