Select Your Language

Notifications

webdunia
webdunia
webdunia
webdunia

ಮಂಡ್ಯ ಅಭಿಮಾನಕ್ಕೆ‌ ಮನಸೋತ ಸನ್ನಿ

Anxiety for Mandya's goodwill
mandya , ಮಂಗಳವಾರ, 17 ಮೇ 2022 (20:44 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ಸದ್ಯ ಅಭಿಮಾನಿಗಳ ಹಾಟ್ ಫೇವರಿಟ್. ಒಂದು ಕಾಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಬಾಲಿವುಡ್ ಎಂಟ್ರಿ ಬಳಿಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಸ್ಟಾರ್ ಹೀರೋಗಳ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗಳಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದರು. ನಟನೆ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ, ದೊಡ್ಡ ಅಭಿಮಾನಿ ಬಳಗವನ್ನೇ ಪಡೆದರು. ಅದರಲ್ಲೂ ಮಂಡ್ಯದ ಅಭಿಮಾನಿಗಳಂತು ಸನ್ನಿ ಮೇಲೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಮೇ.13ರಂದು ಸನ್ನಿ ಲಿಯೋನ್ ಹುಟ್ಟುಹಬ್ಬ ಅಂಗವಾಗಿ ಮಂಡ್ಯದ ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು..ಇದನ್ನು ಗಮನಿಸಿದ ಸನ್ನಿ ತಮ್ಮ ಟ್ವಿಟರ್ ಖಾತೆಯಲ್ಲಿ, ಇದು ನಂಬಲು ಅಸಾಧ್ಯ, ನಿಮಗೆ ಗೌರವ ಸೂಚಿಸಲು ನಾನೂ ಹೋಗಿ ರಕ್ತದಾನ ಮಾಡುತ್ತೇನೆ, ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BMW ಕೊಟ್ಟು ರಾಖಿಗೆ ಪ್ರಪೋಸ್!