Publish Date: Thu, 16 Jan 2020 (17:42 IST)
Updated Date: Thu, 16 Jan 2020 (17:44 IST)
ರಾಜ್ಯ ಸರಕಾರವು ಇನ್ಮುಂದೆ ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡೋರಿಗೆ ಡ್ರೆಸ್ ಕೋಡ್ ಜಾರಿಗೆ ತರೋಕೆ ಚಿಂತನೆ ನಡೆಸಿದ್ದು, ಇದು ವಿವಾದಕ್ಕೆ ಕಾರಣವಾಗೋ ಲಕ್ಷಣಗಳು ಗೋಚರಿಸಿವೆ.
ಮುಖ್ಯವಾದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಅಂತ ಕೆಲವೊಂದಿಷ್ಟು ಜನರು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರಂತೆ.
ಹೀಗಾಗಿ ದೇವಸ್ಥಾನಕ್ಕೆ ಪ್ರವೇಶ ಮಾಡೋ ಭಕ್ತರಿಗೆ ಯಾವ ರೀತಿ ಡ್ರೆಸ್ ಕೋಡ್ ಇರಬೇಕು ಅನ್ನೋ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ. ಶೀಘ್ರದಲ್ಲೇ ಧಾರ್ಮಿಕ ಪರಿಷತ್ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ವಸ್ತ್ರ ಸಂಹಿತೆ ಬಗ್ಗೆ ಚರ್ಚೆ ನಡೆಯೋ ಸಾಧ್ಯತೆ ಇದೆ.
ಧಾರ್ಮಿಕ ಪರಿಷತ್ ಸಭೆ ಬಳಿಕವಷ್ಟೇ ಸರಕಾರ ತನ್ನ ನಿರ್ಧಾರ ಪ್ರಕಟಗೊಳಿಸಲಿದೆ.