Select Your Language

Notifications

webdunia
webdunia
webdunia
webdunia

ಹೊಸ ಜಿಲ್ಲೆ ರಚನೆಗೆ ಮುಂದಾದ ರಾಜ್ಯ ಸರಕಾರ

ಹೊಸ ಜಿಲ್ಲೆ ರಚನೆಗೆ ಮುಂದಾದ ರಾಜ್ಯ ಸರಕಾರ
ಹುಬ್ಬಳ್ಳಿ , ಶನಿವಾರ, 28 ಸೆಪ್ಟಂಬರ್ 2019 (18:09 IST)
ರಾಜ್ಯದಲ್ಲಿ ಹೊಸ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತರಬೇಕೆಂದು ರಾಜ್ಯ ಸರಕಾರ ನಿರ್ಧಾರ ಮಾಡಿದೆ.

ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಉಪ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಾಗಿದೆ.

ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಪ್ರಕರಣ ಇತ್ಯರ್ಥವಾದ ಬಳಿಕ ಬೈ ಎಲೆಕ್ಷನ್ ದಿನಾಂಕ ನಿಗದಿ ಮಾಡಬೇಕಿತ್ತು. ಆದ್ರೇ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ ಅಂತಂದ್ರು.

ನೆರೆ ಪರಿಹಾರ ಬಿಡುಗಡೆಗೆ ಯಾವುದೇ ವಿಳಂಬವಾಗಿಲ್ಲ. ನೆರೆ ಪರಿಹಾರ ಕೇಂದ್ರದಿಂದ ಬರುವುದು ಸ್ವಲ್ಪ ತಡವಾಗಿದೆ ಅಷ್ಟೇ. ಆದ್ರೇ ರಾಜ್ಯ ಸರ್ಕಾರ ಈಗಾಗಲೇ 1 ಸಾವಿರ ಕೋಟಿ ಬಿಡುಗಡೆ ಮಾಡಿದೆ.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ‌. ಆರಂಭದಲ್ಲಿ ಮನೆ ಹಾನಿಗೋಳಗಾದವರಿಗೆ ಒಂದು ಲಕ್ಷ ಪರಿಹಾರ ನೀಡಲಾಗುತ್ತಿದೆ. 5 ಲಕ್ಷ ವೆಚ್ಚದಲ್ಲಿ ಸಂತ್ರಸ್ಥರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದ್ರು.

ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗಳ ವಿಭಜನೆಯ ಸಂದರ್ಭದಲ್ಲಿ ಇದೆಲ್ಲವೂ ಸಹಜ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಮಾಡುತ್ತೇವೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹೊಸ ಜಿಲ್ಲೆ ರಚನೆಯ ನಿರ್ಧಾರ ಮಾಡ್ತೇವೆ ಅಂತಂದ್ರು.



 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡು ಮೆಟ್ಟಿನ ನೆಲದಲ್ಲಿ ನವರಾತ್ರಿ ಉತ್ಸವ ಸಂಭ್ರಮ