Select Your Language

Notifications

webdunia
webdunia
webdunia
webdunia

ಬಿಬಿಎಂಪಿಯಿಂದ ಮತ್ತೊಂದು ಎಡವಟ್ಟಿನ ಯೋಜನೆ

ಬಿಬಿಎಂಪಿಯಿಂದ ಮತ್ತೊಂದು ಎಡವಟ್ಟಿನ ಯೋಜನೆ
bangalore , ಶನಿವಾರ, 11 ಮಾರ್ಚ್ 2023 (17:03 IST)
ಹಣ ಲೂಟಿಗೆ ಅಂತ ಬಿಬಿಎಂಪಿ ಹೊಸ ಯೋಜನೆಗೆ ಪ್ಲಾನ್ ಮಾಡಿದೆ.ಸಾರ್ವಜನಿಕ ತೆರಿಗೆ ಹಣ ಪೋಲ್ ಮಾಡಲು ಪಾಲಿಕೆ ಅಧಿಕಾರಿಗಳು ಪ್ಲಾನ್ ಮಾಡಿದ್ದು,ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
 
ವಿಧಾನಸಭೆ ಚುನಾವಣೆ ಗೂ ಮುನ್ನ ಪಾಲಿಕೆ ಖಜಾನೆ ಲೂಟಿ ಮಾಡಲು ಅಧಿಕಾರಿಗಳ ಪ್ಲಾನ್ ಮಾಡಿದ್ದು,ಈಗಾಗಲೇ ಟೆಂಡರ್ ಬಿಬಿಎಂಪಿ ಬಿಬಿಎಂಪಿ ಕರೆದಿದೆ.ಬೇಕಾಬಿಟ್ಟಿ ಯೋಜನೆಗಳನ್ನು ರೂಪಿಸಿ ಹಣ ಲೂಟಿಗೆ  ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
 
ನಗರದಲ್ಲಿ ಒಣಕಸಕ್ಕೆ ಬೆಂಕಿ ಹಾಕುವುದನ್ನು ತಡೆಗಟ್ಟಲು 270 ಇ.ಬೈಕ್ ಖರೀದಿಗೆ ಟೆಂಡರ್  ಆಹ್ವಾನಿಸಿದ್ದು,ಕೇಂದ್ರ ಸರ್ಕಾರದ ರಾಷ್ಟ್ರೀಯ ವಾಯು ಮಾಲಿನ್ಯ ನಿಯಂತ್ರಣ ಯೋಜನೆ ಅಡಿ ಇ.ಬೈಕ್ ಖರೀದಿ ಮಾಡಲಿದ್ದಾರೆ.ನಾಲ್ಕು ಕೋಟಿ ವೆಚ್ಚದಲ್ಲಿ 270 ಇ.ಬೈಕ್ ಖರೀದಿ ಮಾಡಿ ಪಾಲಿಕೆಯ 243 ವಾರ್ಡ್ ಗಳಿಗೆ ತಲಾ ಒಂದರಂತೆ ಮಾರ್ಷಲ್ ಗಳಿಗೆ ವಿತರಣೆ ಮಾಡಲಿದ್ದಾರೆ.ಜೊತೆಗೆ 27 ವಿಧಾನಸಭ ಕ್ಷೇತ್ರದ ಮೇಲ್ವಿಚಾರಕರಿಗೆ ಬೈಕ್ ವಿತರಣೆ ಮಾಡಲಿದ್ದಾರೆ.ಈ ಬೈಕ್ ನಲ್ಲಿ ಅಗ್ನಿ ನಂದಿಸೋ ಉಪಕರಣಗಳು.. ನೀರು ಸಿಂಪಡಿಸೋ ಯಂತ್ರಗಳನ್ನು ಒಳಗೊಂಡಿರುತ್ತೆ.ಪ್ರತಿ ದಿನ ಮಾರ್ಷಲ್ ಗಳು ವಾರ್ಡನಲ್ಲಿ ಇ.ಬೈಕ್ ಮೂಲಕ ಸಂಚಾರ ಮಾಡಿ ವಾರ್ಡನಲ್ಲಿ ನಿಗಾ ವಹಿಸಬೇಕು.ಹೀಗೆ ಬೈಕ್ ಖರೀದಿ  ಮೂಲಕ ಜನರ ತೆರಿಗೆ ಹಣ ದುಂದು ವೆಚ್ಚಕ್ಕೆ ಪಾಲಿಕೆ ಮುಂದಾಗಿದೆ ಎಂದು ಪಾಲಿಕೆಯ ವಿರುದ್ಧ ಬಿಬಿಎಂಪಿ ಘನತ್ಯಾಜ್ಯ ಘಟಕದ ಮುಖ್ಯ ಇಂಜಿನಿಯರಾದ ಪ್ರವೀಣ್ ಲಿಂಗಯ್ಯ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೃವನಾರಾಯಣ್ ನಿಧನಕ್ಕೆ ಎಂ ಬಿ ಪಾಟೀಲ್ ಸಂತಾಪ