Select Your Language

Notifications

webdunia
webdunia
webdunia
webdunia

ಬಿಜೆಪಿಯವರಿಗೆ ಈಗಾಗಲೇ ಅವರಿಗೆ ೬೦ ಸ್ಥಾನಗಳ ಮೇಲೆ ಹೋಗೋದಿಲ್ಲ- ಬಿ ಕೆ ಹರಿಪ್ರಸಾದ್

BK Hariprasad said BJP has already won more than 60 seats
bangalore , ಶನಿವಾರ, 11 ಮಾರ್ಚ್ 2023 (16:31 IST)
ಬಿಜೆಪಿಯವರಿಗೆ ಈಗಾಗಲೇ ಅವರಿಗೆ ೬೦ ಸ್ಥಾನಗಳ ಮೇಲೆ ಹೋಗುವುದಿಲ್ಲ ಅಂತಾ ಗೊತ್ತಿದೆ ಎಂದು ಪರಿಷತ್ ವಿಪಕ್ಷನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು 40% ಕಮಿಷನ್ ಸರ್ಕಾರವನ್ನು 40 ಸ್ಥಾನಗಳಿಗೆ ಸೀಮಿತಗೊಳಿಸಲು ತಂತ್ರ ಮಾಡಿದ್ದೇವೆ.ಬಿಜೆಪಿಯಿಂದ ಬೇಸತ್ತು ನಮ್ಮ ಪಕ್ಷಕ್ಕೆ ಹಲವು ನಾಯಕರು ಬರುತ್ತಿದ್ದಾರೆ.ಪುಟ್ಟಣ್ಣ ಅಂತಹವರೇ ಕಾಂಗ್ರೆಸ್ ಗೆ ಬಂದಿರೋದ್ರಿಂದ ಇದು ಗೊತ್ತಾಗುತ್ತೆ.ಲಿಂಗಾಯತ ನಾಯಕರನ್ನ ಬಿಜೆಪಿ ಪಕ್ಷ ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ.ಯಡಿಯೂರಪ್ಪ ಅಂತಹ ನಾಯಕರನ್ನೇ ಮೂಲೆ ಗುಂಪು ಮಾಡಿ,ಮಾರ್ಗದರ್ಶನ ಮಂಡಳಿಯ ಮಾರ್ಗದಲ್ಲಿ ನಿಲ್ಲಿಸಿದ್ದಾರೆ.ವಿ ಸೋಮಣ್ಣನವರು ಲಿಂಗಾಯತ ನಾಯಕರು ಜೊತೆಗೆ ಬೇರೆ ಸಮುದಾಯಗಳ ಜೊತೆಗೆ ಒಳ್ಳೆ ಸಂಬಂಧ ಇದೆ.ಬಿಜೆಪಿಯಿಂದ ಸೋಮಣ್ಣನವರೇ ಬೇಸತ್ತಿರುವುದು ನಿಜಾ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ನಂಬಿ ಯಾರು ಬೇಕಾದರೂ ಬರಬಹುದು. ಇನ್ನೂ ಬಿಜೆಪಿಗೆ ಮಂಡ್ಯ ಸಂಸದೆ ಸುಮಲತಾ ಸೇರ್ಪಡೆಯಿಂದ ತ್ರಿಕೋನ ಸ್ಪರ್ಧೆ ಆಗುತ್ತಾ ನೋಡೋಣ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ - ವಿವಿಧ ಪಕ್ಷಗಳ ಜೊತೆ ಸಭೆ