Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ - ವಿವಿಧ ಪಕ್ಷಗಳ ಜೊತೆ ಸಭೆ

ರಾಜ್ಯಕ್ಕೆ ಚುನಾವಣಾ ಆಯೋಗ ಭೇಟಿ - ವಿವಿಧ ಪಕ್ಷಗಳ ಜೊತೆ ಸಭೆ
bangalore , ಶನಿವಾರ, 11 ಮಾರ್ಚ್ 2023 (15:49 IST)
ಕರ್ನಾಟಕ ಅಸೆಂಬ್ಲಿ ಎಲೆಕ್ಷನ್​​ಗೆ ಆಯೋಗ ತಯಾರಿ ನಡೆದಿದೆ. ಚುನಾವಣಾ ಆಯೋಗದಿಂದ ಇಂದು ಮಹತ್ವದ ಸಭೆ ನಡೆಸಲಾಗಿದೆ...ಅಸೆಂಬ್ಲಿ ಎಲೆಕ್ಷನ್​​​​ ಡೇಟ್​ ಫಿಕ್ಸ್​ಗೆಈಗಾಗಲೇ ಚುನಾವಣಾ ಆಯೋಗ ತಯಾರಿ ಮಾಡಿದ್ದು, ಮುಖ್ಯ ಚುನಾವಣಾ ಆಯುಕ್ತರ ತಂಡದಿಂದ ಇಂದು ಮಹತ್ವದ ಮೀಟಿಂಗ್​​ ನಡೆಸಲಾಗಿದೆ . ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ವಿಕಾಸ ಸೌಧ ದಲ್ಲಿ ಇಂದು ಮಧ್ಯಾಹ್ನ 2.30ರಿಂದ ಸಂಜೆ 5:30 ರವರೆಗೆ ಒನ್​​ ಟು ಒನ್​​​​​​​ ಸಭೆ ಮಾಡಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯ ಸಂಗ್ರಹ ಮಾಡಿದೆ.ಇನ್ನೂ ಮಾರ್ಚ್​ 10 ರಂದು ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಪೂರ್ವಭಾವಿ ಸಭೆ ಮಾಡಿ, ಮಾರ್ಚ್​ 11ರಂದೂ ಕರ್ನಾಟಕದಲ್ಲೇ ಜಾಗೃತಿ ಕಾರ್ಯಕ್ರಮ ಮೂಡಿಸುತ್ತದೆ. ಮಾರ್ಚ್​ ಅಂತ್ಯದ ವೇಳೆಗೆ ಚುನಾವಣಾ ಅಧಿಸೂಚನೆ ಫಿಕ್ಸ್​ ಆಗಲಿದೆ. ಏಪ್ರಿಲ್​​​​ ಮೂರನೇ ವಾರ ಅಥವಾ 4ನೇ ವಾರದಲ್ಲಿ ಎಲೆಕ್ಷನ್​​​​ ನಡೆಯಲಿದ್ದು, ಆಯೋಗ ನಾಳೆಯೇ ಎಲೆಕ್ಷನ್​​ ಮುಹೂರ್ತ ಡಿಸೈಡ್ ಮಾಡಲಿದೆ. ಕರ್ನಾಟಕದಿಂದ ವಾಪಸ್​ ಆದ ತಕ್ಷಣೆ ಡೇಟ್​ ಅನೌನ್ಸ್ ಸಾಧ್ಯತೆಗಳಿವೆ ಎಂಬುದು ತಿಳಿದು ಬಂದಿದೆ ಇನ್ನೂ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದ ತಂಡ,  ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ, ಅರುಣ್ ಗೋಯಲ್‌ ಸಾಥ್​​​,  ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲೂ ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿವು