Select Your Language

Notifications

webdunia
webdunia
webdunia
webdunia

ಪ್ರಯಾಣಿಕರಿಗೆ ಮತ್ತೊಂದು ಕಹಿಸುದ್ದಿ: ಖಾಸಗಿ ಬಸ್‌ ದರ ಏರಿಕೆಗೆ ಅವಕಾಶ ಕೋರಿದ ಬಸ್‌ ಮಾಲೀಕರು

private bus fare hike

Sampriya

ಬೆಂಗಳೂರು , ಭಾನುವಾರ, 5 ಜನವರಿ 2025 (12:54 IST)
Photo Courtesy X
ಬೆಂಗಳೂರು: ಸಾರಿಗೆ ಸಂಸ್ಥೆ ಬಸ್‌ಗಳ ಪ್ರಯಾಣ ದರವನ್ನು ಸರ್ಕಾರವು ಮಧ್ಯರಾತ್ರಿಯಿಂದಲೇ ಶೇ 15 ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ಖಾಸಗಿ ಬಸ್ ಗಳ ಮಾಲೀಕರೂ ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶ ಕೋರಿದ್ದಾರೆ.

ಈ ಬಗ್ಗೆ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ, ಪ್ರಯಾಣ ದರ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಅದರಲ್ಲೂ ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಸರಿ ಸಮವಾಗಿ ಖಾಸಗಿ ಬಸ್ ಗಳೂ ಓಡಾಟ ನಡೆಸುತ್ತಿದ್ದು, ಸಾರ್ವಜನಿಕರಿಗೆ ಬಸ್ ಸೇವೆ ಒದಗಿಸುತ್ತಿವೆ. ಕೋವಿಡ್ ನಂತರ ಖಾಸಗಿ ಬಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ತುತ್ತಾಗಿದೆ. ರಾಜ್ಯ ಸರ್ಕಾರ ಶಕ್ತಿ ಯೋಜನೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ನಷ್ಟಕ್ಕೀಡಾದ ಹಲವು ಖಾಸಗಿ ಬಸ್ ಕಂಪೆನಿಗಳು ಬಾಗಿಲು ಮುಚ್ಚಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈಗ ಬಿಡಿ ಭಾಗಗಳ ಬೆಲೆ ಹೆಚ್ಚಳ, ಪೆಟ್ರೋಲ್-ಡೀಸೆಲ್ ದರ ಹಾಗೂ ಬಸ್ ಗಳ ನಿರ್ವಹಣೆ ವೆಚ್ಚವೂ ಏರಿಕೆಯಾಗಿದೆ. ಇದರಿಂದ ಖಾಸಗಿ ಬಸ್ ಉದ್ಯಮ ನಡೆಸುವುದು ಕಷ್ಟವಾಗಿದೆ. ಖಾಸಗಿ ಬಸ್ ಗಳನ್ನು ನಂಬಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ವೇತನ ಭತ್ಯೆ ಹೆಚ್ಚಳವಾಗದೇ ಅವರಿಗೂ ತೊಂದರೆಯಾಗಿದೆ. ನಷ್ಟದಿಂದ ಬಸ್ ಗಳ ಓಡಾಟ ನಿಂತು ಹೋದರೆ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಷ್ಟ ಸರಿದೋಗಿಸಿ ಖಾಸಗಿ ಬಸ್ ಉದ್ಯಮ ಉಳಿಸಲು ಸಾರಿಗೆ ಸಂಸ್ಥೆಯ ಬಸ್ ಗಳ ರೀತಿ ಖಾಸಗಿ ಬಸ್ ಗಳ ಪ್ರಯಾಣ ದರವನ್ಜು ಹೆಚ್ಚಳ ಮಾಡಲು ಅವಕಾಶ ಮಾಡಿಕೊಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಡನ್‌ ಪಡೆದ ಉಡುಗೊರೆಗಳಲ್ಲಿ ಮೋದಿ ಗಿಫ್ಟ್‌ ಅತ್ಯಂತ ದುಬಾರಿ: ಹಾಗಾದರೆ ಪ್ರಧಾನಿ ನೀಡಿದ್ದೇನು