Publish Date: Mon, 24 Jul 2023 (17:47 IST)
Updated Date: Mon, 24 Jul 2023 (17:50 IST)
ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದಲ್ಲಿ ದೋಖಾ ಆಗಿದೆ ಎಂದು ಬಿಜೆಪಿ ಪರೋಕ್ಷವಾಗಿ ಟ್ವೀಟ್ ಮಾಡಿದೆ.ಹತ್ತು ಕೆಜಿ ಅಕ್ಕಿಯ ಗ್ಯಾರಂಟಿ ನೀಡಿ, ಮೋಸದಿಂದ ಅದನ್ನು ಐದು ಕೆಜಿಗೆ ಇಳಿಸಿ, ಅದನ್ನೂ ಕೊಡದೆ ಕೇವಲ ₹170 ಕೊಟ್ಟು ಕೈ ತೊಳೆದುಕೊಳ್ಳುತ್ತೇವೆ ಎಂದ ಸಿದ್ದರಾಮಯ್ಯ ಸರ್ಕಾರ ಅದನ್ನೂ ನೀಡದೆ ಕೈ ಎತ್ತಿದೆ.ಹಣ ವರ್ಗಾಯಿಸಲೂ ಕಂಡೀಷನ್ಸ್ ಹಾಕುವ ಕಾಂಗ್ರೆಸ್ ಸರ್ಕಾರದಲ್ಲಿ ಅನ್‌ಕಂಡೀಷನಲ್ ಆಗಿ ನಿತ್ಯವೂ ನಡೆಯುವುದು ಕಲೆಕ್ಷನ್ ವ್ಯವಹಾರ ಮಾತ್ರ. ಬಹುಶಃ, 12 ಜಿಲ್ಲೆಯವರ ಕಮಿಷನ್ ಸಂದಾಯ ಬಾಕಿ ಇರುವ ಕಾರಣ ಬಡಜನರ ಖಾತೆಗೆ ಸರ್ಕಾರ ಹಣ ಹಾಕುತ್ತಿಲ್ಲವೇನೋ ಎಂದು ಬಿಜೆಪಿ ಟ್ವೀಟ್ ಮಾಡಿದೆ.