Publish Date: Mon, 24 Jul 2023 (17:13 IST)
Updated Date: Mon, 24 Jul 2023 (17:20 IST)
ನಿನ್ನೆ ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಇಂದು ಪುನಃ ಆರಂಭಗೊಂಡಿದ್ದು, ಇಂದು ಕೂಡ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ, ಬೆಂಗಳೂರು ಒನ್‌ಗಳಲ್ಲಿ ಗೃಹಲಕ್ಷ್ಮಿಯರು ಬೆಳ್ಳಗೆಯಿಂದಲೇ ಕ್ಯೂ ನಿಂತಿದ್ದಾರೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಗೆ 22,90,782 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಕೂಡ ಅರ್ಜಿ ಸಲ್ಲಿಕೆಗೆ ಸರ್ವರ್ ಕಾಟವಿದ್ದು, ಸರ್ವರ್ ಸಮಸ್ಯೆ ಇದ್ದರು ಅರ್ಜಿ ಸಲ್ಲಿಕೆಗೆ ಮಹಿಳೆಯರು ಕಾದು ಕುಳಿತಿದ್ದಾರೆ. ಗೃಹಲಕ್ಷ್ಮಿಯರು ಮೊಬೈಲ್ಗೆ ಮೆಸೇಜ್ ಬರದೇ ಗೊಂದಲದಲ್ಲಿದ್ದಾರೆ. ಗೃಹಲಕ್ಷ್ಮಿಗೆ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕಾರ ಆಗ್ತಿಲ್ಲ ಎನ್ನುತ್ತಿದ್ದಾರೆ.