Publish Date: Mon, 24 Jul 2023 (16:32 IST)
Updated Date: Mon, 24 Jul 2023 (17:33 IST)
ಕಮಲ-ದಳ ಜಂಟಿ ಹೋರಾಟ, ಹೊಂದಾಣಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ.ಜುಲೈ 27ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಜೆಪಿ, ಜೆಡಿಎಸ್ ಎದುರಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ CLP ಮೀಟಿಂಗ್ ನಡೆಯಲಿದ್ದು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗಿಯಾಗಲಿದ್ದಾರೆ. ಲೋಕಸಭೆ ಎಲೆಕ್ಷನ್ಗೆ ಭಾರೀ ಸಿದ್ದತೆ ನಡೆದಿದ್ದು, ನಿಗಮ ಮಂಡಳಿ ನೇಮಕ ಮಾಡಲಾಗ್ತಿದೆ. ಗ್ಯಾರಂಟಿಗಳ ಅನುಷ್ಠಾನ ಹಾಗೂ ಪ್ರಚಾರ ಸಂಬಂಧ ಚರ್ಚೆ ನಡೆಯಲಿದೆ.