ಆನಂದ ಅಸ್ನೋಟಿಕರ್ ಗೆ ಪರಮ ನೀಚ ಎಂದವರಾರು?

Webdunia
ಸೋಮವಾರ, 2 ಜುಲೈ 2018 (17:34 IST)
ಅನಂತಕುಮಾರ ಹೆಗಡೆ ಅವರನ್ನು ನೀಚ ಎಂದು ಕರೆದಿರುವ ಆನಂದ್ ಅಸ್ನೋಟಿಕರ ಪರಮ ನೀಚ ಎಂದು ಹಳಿಯಾಳದ ಮಾಜಿ ಶಾಸಕ ಸುನೀಲ್ ಹಗಡೆ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ದೇಶಪಾಂಡೆಯವರ ಕಾಲು ನೆಕ್ಕುವ ಮಟ್ಟಿಗೆ ಆನಂದ್ ತಲುಪಿದ್ದಾರೆ. ಅವರ ಹಿಂದೆಯೇ ಅಲೆಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ದೇಶಪಾಂಡೆ ಅವರನ್ನು ಬ್ಲಾಕ್‍ಮೇಲ್ ಮಾಡಲು ಆನಂದ್ ಈ ರೀತಿ ಮಾಡುತ್ತಿದ್ದಾರೆ. ಅನಂತಕುಮಾರ ಅವರ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನ್ನು ಖಂಡಿಸುತ್ತೇನೆ ಎಂದರು.
ಕಾಗೇರಿ ಅವರ ಮೇಲೆ ಅನಂತಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿಕೆ ಕೊಡುವ ಆನಂದ ಅಸ್ನೋಟಿಕರ ಅವರ ಮೇಲೆಯೇ ಈ ಹಿಂದೆ ಗೋವಾದಲ್ಲಿ ಹಲ್ಲೆಯಾಗಿದೆ. ಕ್ಯಾಸಿನೋದಲ್ಲಿ ಬೌನ್ಸರ್‍ಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲಿ ಯಾವ ರಾಜಕೀಯಕ್ಕಾಗಿ ಹೋದವರಲ್ಲ. ತಮ್ಮ ತೆವಲು ತೀರಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ. ಅನಂತಕುಮಾರ ಅವರನ್ನು ನಿಂದಿಸಲು ಆನಂದ ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.

ಆನಂದ ರಾಜಕೀಯಕ್ಕೆ ಅಪ್ರಯೋಜಕರು. ಬಿಜೆಪಿಯಲ್ಲಿದ್ದ ವೇಳೆ ಆನಂದ ಹಲವಾರು ಬಾರಿ ಕಾಗೇರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬೈದಿದ್ದಾರೆ. ಆನಂದ ಅವರಿಗೆ ಬೆಂಬಲ ನೀಡಿ ಮಂತ್ರಿ ಮಾಡುವಲ್ಲಿ ಅನಂತಕುಮಾರ ಅವರು ಸಹಾಯ ಮಾಡಿದ್ದರು. ಆದರೆ ಆ ನಿಷ್ಠೆಯನ್ನು ಇಟ್ಟುಕೊಳ್ಳದ ಕಾರಣ ಈ ಬಾರಿ ಅವರನ್ನು ದೂರವಿಟ್ಟಿದ್ದು. ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ತಾನು ದೊಡ್ಡ ನಾಯಕ ಎಂಬುದನ್ನು ತೋರಿಸಿಕೊಳ್ಳಲು ಈಗ ಅವರು ಪ್ರಯತ್ನಿಸುತ್ತಿದ್ಧಾರೆ ಎಂದರು. ಇಂತಹ ನೀಚತನದ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ಮುದುವರೆಸಿದರೆ ಅವರು ಹೋದಲ್ಲೆಲ್ಲ ಬಿಜೆಪಿಯಿಂದ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂ ಧರ್ಮ ಬೈತಿದ್ದವರಿಗೆ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಒಳ್ಳೆ ಪೋಸ್ಟ್ ಕೊಡ್ತಾರೆ: ಯತ್ನಾಳ್

ಪಶ್ಚಿಮ ಬಂಗಾಲದಲ್ಲಿ ಎಲ್ಲರೆದುರೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ: ಭೀಕರ ದೃಶ್ಯ ವೈರಲ್ Video

ಎದುರು ಬೈಕ್ ಇದ್ದರು ಗುದ್ದಿಕೊಂಡೆ ಹೋದ ಥಾರ್ ಡ್ರೈವರ್, ಸ್ವಲ್ಪ ಹೆಚ್ಚುಕಮ್ಮಿ ಆಗ್ತಾ ಇದ್ರೂ ಸವಾರನ ಜೀವಕ್ಕೆ ಕುತ್ತು, Video

ಬಡವರ ಮಕ್ಕಳನ್ನು ಆರ್ ಎಸ್ಎಸ್ ಗೆ ಬಿಡ್ತಾರೆ, ಬಿಜೆಪಿಯವರ ಮಕ್ಕಳು ಇರ್ತಾರಾ: ಪ್ರಿಯಾಂಕ್ ಖರ್ಗೆ

ಸಹಪಾಠಿಗಳ ಕಿರುಕುಳ, ಶಿಕ್ಷಕರ ನಿರ್ಲಕ್ಷ್ಯಕ್ಕೆ ಜೀವಕ್ಕೆ ಕುತ್ತುತಂದುಕೊಂಡ 4ತರಗತಿ ಬಾಲಕಿ, Video

ಮುಂದಿನ ಸುದ್ದಿ
Show comments