Publish Date: Sun, 28 Jan 2018 (19:44 IST)
Updated Date: Sun, 28 Jan 2018 (19:46 IST)
ಕಾವಿಗೆ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿಯಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ತರಳುಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಗೌರವ ಕೊಡುವುದು ಕಾವಿಗೆ ಮಾತ್ರ. ಕಾವಿಗೆ ಸದಾ ಕಾಲ ತಲೆಬಾಗುತ್ತೇನೆ ಎಂದು ತಿಳಿಸಿದ್ದಾರೆ.
ದೇಶದ ಇತಿಹಾಸ ಹುಟ್ಟಿದ್ದು, ಸಂತರಿಂದ ಹಾಗೂ ಕಾವಿಧಾರಿಗಳಿಂದ ಹೊರತು ರಾಜಮಹಾರಾಜರಿಂದ ಅಲ್ಲ. ಬಸವಣ್ಣನವರು ಎಲ್ಲರನ್ನೂ ಒಂದು ಮಾಡಲು ಮುಂದಾಗಿದ್ದರು. ಜಾತಿ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಆದರೆ, ಬಸವಣ್ಣ ಹೇಳಿದ್ದೇ ಒಂದು, ಈಗ ನಡೆಯುತ್ತಿರುವುದು ಇನ್ನೊಂದು ಆಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.