Publish Date: Wed, 14 Feb 2018 (15:20 IST)
Updated Date: Wed, 14 Feb 2018 (15:22 IST)
ರಕ್ತ ಪರಿಚಯ ಇಲ್ಲದವರಿಗೆ ರಕ್ತ ಪರಿಚಯ ಆಗುವುದು ಶುರುವಾಗಿದೆ. ಕೋಟಾ ಹಿಂದುತ್ವವಾದಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, ಬಾಯಲ್ಲಿ ಮಾತ್ರ ಹೇಳಿದರೆ ಸಾಲದು, ಆಚರಣೆಯೂ ಮಾಡಬೇಕು. ಆಗ ಆ ರಕ್ತಕ್ಕೆ ಅರ್ಥ ಬರಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರಿಗೆ ಹಿಂದುತ್ವ ಬಗ್ಗೆ ಈಗ ನೆನಪಾಗಿದೆ. ರಾಹುಲ್ ಗಾಂಧಿ ರಾಜ್ಯದಲ್ಲಿ ಓಡಾಡಿದಷ್ಟು ಬಿಜೆಪಿಗೆ ಒಳ್ಳೆಯದು. ಬಿಜೆಪಿ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ. ರಾಹುಲ್ ಗಾಂಧಿ ಅವರ ಓಡಾಟದಿಂದ ಜನರಿಗೆ ಮನರಂಜನೆ ಸಿಕ್ಕಿದೆ. ಜನರು ಕೂಡ ಮನರಂಜನೆ ಇಷ್ಟಪಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.