Publish Date: Wed, 14 Feb 2018 (08:59 IST)
Updated Date: Wed, 14 Feb 2018 (09:01 IST)
ಬೆಂಗಳೂರು: ಪ್ರಧಾನಿ ಮೋದಿಯವರ ಪಕೋಡಾ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೊಲೀಸರಿಗೇ ಅವಮಾನ ಮಾಡಿದರಾ? ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಇಂತಹದ್ದೊಂದು ಟ್ವೀಟ್ ಮಾಡಿದ್ದಾರೆ.
‘ಪಕೋಡಾ ಮಾರುವುದು ಉದ್ಯೋಗವೇ ಅಲ್ಲ ಎನ್ನುವ ಮೂಲಕ ಆ ವೃತ್ತಿ ಮಾಡುವವರಿಗೆ ಕಾಂಗ್ರೆಸ್ ನವರು ಅವಮಾನಿಸಿದರು. ಇದೀಗ ರಾಹುಲ್ ಗಾಂಧಿ ಐಪಿಎಸ್ ಎಂದರೆ ಇಂಡಿಯನ್ ಪಕೋಡಾ ಸರ್ವಿಸ್ ಎಂದು ಪೊಲೀಸರಿಗೇ ಅವಮಾನಿಸಿದ್ದಾರೆ. ಪ್ರತಿ ವೃತ್ತಿಗೂ ಅದರದ್ದೇ ಆದ ಗೌರವವಿದೆ ಎನ್ನುವುದನ್ನು ಕಾಂಗ್ರೆಸ್ ನವರು ಕಲಿಯಲಿ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಜನಾಶೀರ್ವಾದ ಯಾತ್ರೆ ಸಂದರ್ಭ ಬಜ್ಜಿ ಸವಿಯುವಾಗ ರಾಹುಲ್ ಗಾಂಧಿ ಇಂತಹದ್ದೊಂದು ಮಾತನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಬಳಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ