Select Your Language

Notifications

webdunia
webdunia
webdunia
webdunia

ಶೇ10 ಕ್ಕಿಂತಲೂ ಅಧಿಕ ಕಮಿಷನ್ ಪಡೆಯುತ್ತಿರುವ ಸರ್ಕಾರ- ಕುಮಾರಸ್ವಾಮಿ

ಶೇ10 ಕ್ಕಿಂತಲೂ ಅಧಿಕ ಕಮಿಷನ್ ಪಡೆಯುತ್ತಿರುವ ಸರ್ಕಾರ- ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 13 ಫೆಬ್ರವರಿ 2018 (19:43 IST)

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 10ರಷ್ಟು ಕಮಿಷನ್ ಇತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇನ್ನೂ ಹೆಚ್ಚಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಯಲಹಂಕದ ಬಳಿ ಫೆಬ್ರುವರಿ 17ರಂದು ನಡೆಯುವ ವಿಕಾಸ ಪರ್ವ ಯಾತ್ರೆ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಅವಧಿಯಲ್ಲಿ ಪಡೆಯುತ್ತಿದ್ದ ಕಮಿಷನ್ ಮಾಹಿತಿ ಮಾತ್ರ ನೀಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಈ ಕಮಿಷನ್ ಹೆಚ್ಚಾಗಿರುವ ಮಾಹಿತಿ ನೀಡಿಲ್ಲ ಎಂದಿದ್ದಾರೆ.

ಅರ್ಕಾವತಿ ಢಿ ನೋಟಿಫಿಕೇಶನ್ ಅಕ್ರಮದ ಕುರಿತ ಕೆಂಪಣ್ಣ ವರದಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಅವರು ಸಿದ್ದರಾಮಯ್ಯ ರೀಡೂ ಹೆಸರಿನಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಅನುಭವ ಮಂಟಪಕ್ಕೆ ರಾಹುಲ್ ಗಾಂಧಿ ಭೇಟಿ