Select Your Language

Notifications

webdunia
webdunia
webdunia
webdunia

ಮೈಸೂರು ವಿಭಜನೆ ಆಗಬೇಕು ಎಂದ ಆಗ್ರಹಿಸಿದ ಅನರ್ಹ ಶಾಸಕ

ಮೈಸೂರು ವಿಭಜನೆ ಆಗಬೇಕು ಎಂದ ಆಗ್ರಹಿಸಿದ ಅನರ್ಹ ಶಾಸಕ
ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2019 (10:12 IST)
ಬೆಂಗಳೂರು : ಹುಣಸೂರು ಕ್ಷೇತ್ರದ ಉಪಚುನಾವಣೆಯ  ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಹೆಚ್.ವಿಶ್ವನಾಥ್ ಹೊಸ ತಂತ್ರ ರೂಪಿಸಿದ್ದು, ಮೈಸೂರು ವಿಭಜನೆ ಆಗಬೇಕು ಎಂದು ಇದೀಗ ಅವರು ಆಗ್ರಹಿಸಿದ್ದಾರೆ.




ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರು ಮೈಸೂರು ವಿಭಜನೆ ಮಾಡಿ, ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರು ಸೇರಿ 6  ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು. ಇದಕ್ಕೆ ಡಿ.ದೇವರಾಜ ಅರಸ್ ಅವರ ಹೆಸರಿಡಬೇಕು.  ಅದಕ್ಕಾಗಿ ಪ್ರತ್ಯೇಕ ಜಿಲ್ಲೆಗೆ ಹೋರಾಟ ಸಮಿತಿ ರಚನೆ ಮಾಡುತ್ತೇನೆ. ರಾಜ್ಯ, ದೇಶಕ್ಕೆ ಅರಸು ಕೊಡುಗೆ ಅಪಾರ. ಅರಸು ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎಂದು ಹೇಳಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಆಗಾಗ ಮನೆಗೆ ಬರುತ್ತಿದ್ದ ಸ್ನೇಹಿತ ಪತ್ನಿಯ ಜೊತೆ ಸೇರಿ ಮಾಡಿದ್ದೇನು ಗೊತ್ತಾ?