ಬೆಂಗಳೂರು : ಮಕ್ಕಳು ನಿದ್ರೆ ಚೆನ್ನಾಗಿ ಮಾಡಿದರೆ ಅವರ ಆರೋಗ್ಯ ವೃದ್ಧಿಯಾಗುತ್ತದೆ. ಆದರೆ ಕೆಲವು ತಾಯಂದಿರಿಗೆ ಮಕ್ಕಳು ಯಾವ ವಯಸ್ಸಿಗೆ ಎಷ್ಟು ನಿದ್ದೆ ಮಾಡಿದರೆ ಒಳಿತು ಎಂಬುದು ತಿಳಿದಿರುವುದಿಲ್ಲ. ಆದ್ದರಿಂದ ನಿಮ್ಮ ಮಕ್ಕಳು ಯಾವ ವಯಸ್ಸಿನಲ್ಲಿ ಎಷ್ಟು ನಿದ್ದೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. 
									
										
								
																	
*ನವಜಾತ ಶಿಶು- 4ತಿಂಗಳ ಮಗು ದಿನಕ್ಕೆ 16-18 ಗಂಟೆಗಳ ಕಾಲ ನಿದ್ದೆ ಮಾಡಬೇಕಾಗುತ್ತದೆ.
*4-12 ತಿಂಗಳ ಮಗು ಕೇವಲ 13-14 ಗಂಟೆಗಳ ಕಾಲ ನಿದ್ದೆ ಮಾಡಿದರೆ ಉತ್ತಮ.
									
			
			 
 			
 
 			
			                     
							
							
			        							
								
																	*1-2 ವರ್ಷದ ಮಗು ದಿನಕ್ಕೆ ಕನಿಷ್ಠ ಅಂದರೆ 12-13 ಗಂಟೆಗಳ ಕಾಲ ನಿದ್ದೆ ಮಾಡಬೇಕಾಗುತ್ತದೆ.
*3-5 ವರ್ಷದ ಮಗು 10-11 ಗಂಟೆಗಳ ಕಾಲ ನಿದ್ರಿಸಬೇಕು.
									
										
								
																	*6-12 ವರ್ಷದ ಮಗುವನ್ನು ದಿನಕ್ಕೆ 9 ಗಂಟೆಗಳ ಕಾಲ ಮಲಗಿಸಬೇಕು.