Publish Date: Sun, 13 Oct 2019 (06:43 IST)
Updated Date: Sun, 13 Oct 2019 (06:44 IST)
ಬೆಂಗಳೂರು : ಹೆಂಗಸರಿಗೆ ವಯಸ್ಸಾಗುತ್ತಿದ್ದಂತೆ ಅವರ ಮುಖ, ಬಾಯಿಯ ಸುತ್ತಲಿನ ಚರ್ಮ ಸುಕ್ಕುಗಟ್ಟಲು ಶುರುವಾಗುತ್ತದೆ. ಇದರಿಂದ ಅವರಿಗೆ ವಯಸ್ಸಾಗುತ್ತಿರುವುದು ತಿಳಿಯುತ್ತದೆ. ಆದ್ದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಈ ಮನೆಮದ್ದುಗಳನ್ನು ಬಳಸಿ.
*ಅಲೋವೆರಾ ಜೆಲ್ : ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ತುಂಬಾ ಪರಿಣಾಮಕಾರಿ. ಅಲೋವೆರಾ ಜೆಲ್ ನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ.
*ಆಲಿವ್ ಆಯಿಲ್ : ಇದರಲ್ಲಿ ಮಿಟಮಿನ್ ಇ ಇರುವುದರಿಂದ ಇದನ್ನು ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಿ ಬೆಳಿಗ್ಗೆ ತೊಳೆದರೆ ಮುಖದ ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಯಬಹುದು.