Publish Date: Wed, 24 Aug 2022 (18:13 IST)
Updated Date: Wed, 24 Aug 2022 (18:22 IST)
ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡಲು ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಸ್ ಉಗ್ರ ಮುಂದಾಗಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ಬಂಧಿತನಾಗಿರುವ ಐಸಿಸ್ ಉಗ್ರ ಅಜಮೋವ್ ಆತ್ಮಾಹುತಿ ದಾಳಿ ಮೂಲಕ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಯೋಜನೆಯನ್ನು ಮಾಡಿಕೊಂಡಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದೆ. ಅಜಮೊವ್ ಟರ್ಕಿಯಲ್ಲಿ ಐಎಸ್‍ನಿಂದ ನೇಮಕಗೊಂಡು ತರಬೇತಿ ಪಡೆದಿದ್ದ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದು ಬಿಜೆಪಿ ನಾಯಕರು ನಮ್ಮ ಟಾರ್ಗೆಟ್ ಎಂದು ಒಪ್ಪಿಕೊಂಡಿದ್ದಾನೆ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲೆಂದು ಈ ಶಂಕಿತ ಉಗ್ರನನ್ನು ಐಸಿಸ್ ನೇಮಕ ಮಾಡಿಕೊಂಡಿದೆ. ಈ ಉಗ್ರ ಭಾರತ ಪ್ರವೇಶ ಮಾಡುವ ಬಗ್ಗೆ ತಯಾರಿ ಆರಂಭಿಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.