Select Your Language

Notifications

webdunia
webdunia
webdunia
webdunia

ಸಿಲಿಂಡರ್ ಲೀಕ್ ಆಗಿ ಹೊಟೇಲ್ ಧಗ ಧಗ

The hotel caught fire due to a cylinder leak
ಕೊಪ್ಪಳ , ಬುಧವಾರ, 24 ಆಗಸ್ಟ್ 2022 (16:41 IST)
ಹೊಟೇಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ  ಭಾರೀ ಅನಾಹುತ ತಪ್ಪಿದೆ. ಹೋಟೆಲ್ ಹಾಗೂ ಟೀ ಪಾಯಿಂಟ್ ಹೊತ್ತಿ ಊರಿದಿದೆ.ಇನ್ನು ಈ ಘಟನೆ ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ನಡೆದಿದೆ.ಹೋಟೆಲ್ ಹಾಗೂ ಟೀ ಪಾಯಿಂಟ್ ಸುಟ್ಟು ಕರಕಲಾಗಿದೆ.ಹೋಟೆಲ್ ಮುಂಭಾಗವಿದ್ದ ಬೈಕ್ ಕೂಡ ಸುಟ್ಟು ಕರಕಲಾಗಿದೆ.ರಾತ್ರಿ ಹೋಟೆಲ್ ನಲ್ಲಿದ್ದ  ಸಿಬ್ಬಂದಿ  ಸರಿಯಾಗಿ ಸಿಲಿಂಡರ್ ಆಫ್ ಮಾಡದೆ ಇರೋದ್ರಿಂದ ಈ ಘಟನೆ ನಡೆದಿದೆ.ಹೋಟೆಲ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು.ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕೆಲಸ ಮುಂದುವರೆದಿದೆ.ಸದ್ಯ ಹೋಟೆಲ್ ಮೇಲ್ಭಾಗದಲ್ಲಿ ವಾಸ ಮಾಡ್ತಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 
ಇನ್ನೂ ಹೋಟೆಲ್ ಮೇಲ್ಭಾಗ ಎರಡು ಮನೆಗಳಿವೆ.ಮನೆಯಲ್ಲಿದ್ದವರ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದಾರೆ. ಬೆಳಂಬೆಳಗ್ಗೆ ಜನನಿಬಿಡ ಪ್ರದೇಶದಲ್ಲಿರೋ ಹೋಟೆಲ್ ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ರಿಂದ ಜನರು ಆತಂಕಕ್ಕೆ ಒಳಗಾಗಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ದಾಖಲೆ ಇಲ್ಲದೆ ಆರೋಪ -ಶಾಸಕ ರೇಣುಕಾಚಾರ್ಯ ಕಿಡಿ