ಬೇಟೆಗಾರ ವೈಲ್ಡ್ ಡಾಗ್ ಗಳಿಂದ ಜಿಂಕೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದೃಶ್ಯ ಇದು. ಬಂಡೆಯ ಸುತ್ತ ಹಸಿದ ಬೇಟೆಗಾರ ಕಾಡಿನ ಶ್ವಾನಗಳು ಓಡಾಡುವ ದೃಶ್ಯದ ಮೂಲಕ ಈ ದೃಶ್ಯ ಶುರುವಾಗುತ್ತದೆ. ಜಿಂಕೆಗಳನ್ನು ಬೇಟೆಯಾಡುವ ಸಲುವಾಗಿಯೇ ಈ ಬೇಟೆಗಾರ ಕಾಡಿನ ಶ್ವಾನಗಳು ಇಲ್ಲಿ ಸುತ್ತುವರಿದಿದ್ದವು. ಆದರೆ, ಬಂಡೆಯ ತುದಿಯಲ್ಲಿ ತಮ್ಮ ಸಮತೋಲನ ಕಾಯ್ದುಕೊಂಡು ನಿಂತ ಮೂರು ಜಿಂಕೆಗಳು ಕಾಡು ಶ್ವಾನಗಳ ಕೈಗೆ ಸಿಗದೆ ಕಾಡಿದ್ದವು. ಆದರೂ ಒಂದಷ್ಟು ಕಾಡು ಶ್ವಾನಗಳು ಬಂಡೆಯ ತುದಿಗೆ ಹೋಗುವ ಪ್ರಯತ್ನ ಮಾಡಿದವಾದರೂ ಅವುಗಳಿಗೆ ಜಿಂಕೆಯನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಈ ಬೇಟೆಗಾರ ಶ್ವಾನಗಳ ಸಾಮರ್ಥ್ಯ ಮತ್ತು ಬಲಹೀನತೆಯ ಬಗ್ಗೆ ಗೊತ್ತಿದ್ದ ಜಿಂಕೆಗಳು ಧೈರ್ಯದಿಂದ ಒಂದುಚೂರು ಕದಲದೆ ಅಲ್ಲೇ ನಿಂತಿದ್ದವು. ಆದರೆ, ಈ ಬೇಟೆಗಾರ ಪ್ರಾಣಿಗಳು ಮಾತ್ರ ಶಿಕಾರಿ ಎದುರಿಗಿದ್ದರೂ ಹಿಡಿಯಲಾಗದೆ ಚಡಪಡಿಸುತ್ತಿದ್ದವು.ಈ ಕಾಡು ಶ್ವಾನಗಳು ಜಾಸ್ತಿಯಾಗಿ ಆಫ್ರಿಕಾದಲ್ಲಿ ಕಾಣಸಿಗುತ್ತವೆ. ಇವುಗಳನ್ನು ಆಫ್ರಿಕನ್ ಕಾಡು ಶ್ವಾನಗಳು, ಆಫ್ರಿಕನ್ ಪೇಂಟೆಡ್ ಡಾಗ್ ಮತ್ತು ಆಫ್ರಿಕನ್ ಬೇಟೆ ಶ್ವಾನ ಎಂದೂ ಕರೆಯುಲಾಗುತ್ತದೆ.