Publish Date: Fri, 14 Jun 2019 (15:40 IST)
Updated Date: Fri, 14 Jun 2019 (15:41 IST)
ಏನೂ ಅರಿಯದ ಮೂರು ವರ್ಷದ ಮಗುವಿಗೆ ಅಂಗನವಾಡಿ ಶಿಕ್ಷಕಿಯೊಬ್ಬರು ಬರೆ ಹಾಕಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಾಲದಾರಗಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಮಗು ಅಳುತ್ತಿದೆ ಎಂಬ ಕಾರಣಕ್ಕೆ ಬರೆ ಹಾಕಿದ ಶಿಕ್ಷಕಿ ತನ್ನ ವಿಕೃತಿತನ ಮೆರೆದಿದ್ದಾಳೆ.
ಶಿಕ್ಷಕಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪೋಷಕರು ದೂರು ನೀಡಿದ್ದಾರೆ.
ದೂರು ಆಧರಿಸಿ ಅಂಗನವಾಡಿ ಶಿಕ್ಷಕಿಗೆ ನೋಟಿಸ್ ನೀಡಿದೆ ಇಲಾಖೆ. ಮಗು ಅತ್ತಿದ್ದಕ್ಕೆ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.