Select Your Language

Notifications

webdunia
webdunia
webdunia
webdunia

ಅಮೃತಾ ಜ್ಯೋತಿ ಯೋಜನೆ ನಿಯಮ ಸಡಿಲಿಕೆ ಮಾಡುತ್ತೇವೆ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ

ಅಮೃತಾ ಜ್ಯೋತಿ ಯೋಜನೆ ನಿಯಮ ಸಡಿಲಿಕೆ ಮಾಡುತ್ತೇವೆ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ
ಬೆಂಗಳೂರು , ಬುಧವಾರ, 7 ಸೆಪ್ಟಂಬರ್ 2022 (17:01 IST)
SC-ST ಪಂಗಡಕ್ಕೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ಯೋಜನೆಯ ನಿಯಮಾವಳಿ ಸಡಿಲಕ್ಕೆ ತೀರ್ಮಾನಿ ಸಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ನಿಯಮಾ ವಳಿ ಆದೇಶ ಮಾತ್ರ ವಾಪಸ್ ಪಡೆದಿದ್ದೇವೆ.
ಅಮೃತ ಜ್ಯೋತಿ ಯೋಜನೆಯನ್ನು ವಾಪಸ್ ಪಡೆದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸುತ್ತೋಲೆ ಅರ್ಥೈಸಿಕೊಳ್ಳಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ದೊಡ್ಡ ಪ್ರಮಾದ ಮಾಡುತ್ತಿದ್ದಾರೆ.
 
2013 ರಿಂದ 2018 ರವರೆಗೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಇಲಾಖೆಯನ್ನು ದಿವಾಳಿ ಮಾಡುವುದರಲ್ಲಿ ಸಿದ್ದರಾ ಮಯ್ಯ ಪಾತ್ರ ದೊಡ್ಡದು. ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಕಾಂಗಳಿಗೆ 3.500 ಸಾವಿರ ಕೋಟಿ ಸಬ್ಸಿಡಿ ಹಣ ಬಾಕಿ ಇರಿಸಿದ್ದರು. ಅವರ ಪಾಪದ ಕೂಸನ್ನು ಇವತ್ತು ನಾವು ಹೊತ್ತುಕೊಂಡಿದ್ದೇವೆ ಎಂದರು. ಇನ್ನೂ ಡಿ.ಕೆ. ಶಿವಕುಮಾರ್ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ಪಾವಗಡ ಸೋಲಾರ್ ಪ್ಲಾಂಟ್ ಹೇಗೆ ಹಂಚಿಕೆ ಆಗಿದೆ ಅಂತಾ ಗೊತ್ತಿದೆ. ತನಿಖೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಮಾಡುತ್ತೇನೆ. ಸವಾಲು ಸ್ವೀಕಾರ ಅಂದರೆ ರಾಜಕೀಯವಾಗಿ, ತನಿಖೆ ಎಲ್ಲವೂ ಸೇರುತ್ತದೆ. ಅಧಿವೇಶನ ಮುಗಿದ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಡಿಕೆ ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಪೊಲೀಸರ ಕೆಲಸಕ್ಕೆ ರಾಜಧಾನಿಯ ಜನರು ಶಹಬಾಸ್ ..!!!