Publish Date: Fri, 28 Jun 2019 (18:31 IST)
Updated Date: Fri, 28 Jun 2019 (18:34 IST)
ಅಂಬ್ಯುಲೆನ್ಸ್ ಗೆ ಚಾಲನೆ ನೀಡುವ ವೇಳೆ ಬಿಜೆಪಿ ಮುಖಂಡ, ಶಾಸಕ ಬಿ.ಶ್ರೀರಾಮುಲು ಚಾಲಕರಾದ ಘಟನೆ ನಡೆದಿದೆ.
ಅಂಬ್ಯೂಲೆನ್ಸ್ ಚಾಲನೆ ಕಾರ್ಯಕ್ರಮ ವೇಳೆ ಡ್ರೈವಿಂಗ್ ಮಾಡಿದ್ದಾರೆ ಬಿ. ಶ್ರೀರಾಮುಲು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿಯಲ್ಲಿ ಘಟನೆ ನಡೆದಿದೆ.
ಡಿಎಚ್ಓ ಜೊತೆ ಅಂಬ್ಯೂಲೆನ್ಸ್ ಚಾಲನೆ ಮಾಡಿಕೊಂಡು ಹೋದರು ರಾಮುಲು.
ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ಸಾಮಾನ್ಯರಂತೆ ಅಂಬ್ಯುಲೆನ್ಸ್ ಚಾಲನೆ ಮಾಡಿದ್ದು ಬಿಜೆಪಿ ಕಾರ್ಯಕರ್ತರಿಗೆ, ಮುಖಂಡರಲ್ಲಿ ಹಾಗೂ ಜನರಲ್ಲಿ ಸಂತಸಕ್ಕೆ ಕಾರಣವಾಯಿತು. ಅಂಬ್ಯುಲೆನ್ಸ್ ನ್ನು ಕಿಲೋಮೀಟರ್ ದೂರದವರೆಗೆ ಸ್ವತಃ ಡ್ರೈವ್ ಮಾಡಿದ ಶಾಸಕ ರಾಮುಲು ಗಮನ ಸೆಳೆದರು.