Publish Date: Sun, 27 Feb 2022 (14:12 IST)
Updated Date: Sun, 27 Feb 2022 (17:43 IST)
ಅಂಬರೀಷ್ ಅವರಿಗೆ ಕೋಟಿಕೋಟಿ ಹಣ ಸಂಪಾದನೆ ಮಾಡುವ ಆಸೆ ಇರಲಿಲ್ಲ. ಆದರೆ, ಕೋಟಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಎಂದು ಕಂಠೀರವ ಸ್ಟುಡಿಯೋದಲ್ಲಿ ಸುಮಲತಾ ಹೇಳಿಕೆ ನೀಡಿದ್ದಾರೆ. ಅಂಬರೀಷ್ ಅವರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ.
ಸ್ಮಾರಕ ನಿರ್ಮಾಣ ಮಾಡುವ ಯೋಜನೆಗೆ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಐದೇ ನಿಮಿಷಗಳಲ್ಲಿ ಒಪ್ಪಿಗೆ ನೀಡಿದ್ದರು. ಯಡಿಯೂರಪ್ಪ ಅವರಿಗೂ ಅನಂತ ಅನಂತ ಧನ್ಯವಾದಗಳು. ಸಿನಿಮಾ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಂಬರೀಷ್ ಕೊಡುಗೆ ಏನು ಎಂಬುದು ಸಮಾಜಕ್ಕೆ ತಿಳಿಯಬೇಕಿದೆ. ಹೀಗಾಗಿ ಸ್ಮಾರಕದ ಅವಶ್ಯಕತೆ ಇದೆ' ಎಂದು ಸುಮಲತಾ ಹೇಳಿಕೆ ನೀಡಿದ್ದಾರೆ.