Publish Date: Sun, 27 Feb 2022 (08:50 IST)
Updated Date: Sun, 27 Feb 2022 (09:13 IST)
ಫರೀದಾಬಾದ್: ಶಾಲೆಯಲ್ಲಿ ತನ್ನನ್ನು ಹೀಯಾಳಿಸುತ್ತಿದ್ದರು ಎಂಬ ಕಾರಣಕ್ಕೆ 15 ವರ್ಷದ ಬಾಲಕ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲಿಕಾ ಅಸ್ವಸ್ಥೆಯಿಂದ ಬಳಲುತ್ತಿದ್ದ ಹುಡುಗ ಸಾಯುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ತಾಯಿಗೆ ಕ್ಷಮೆ ಕೇಳಿದ್ದಾನೆ. ಅಲ್ಲದೆ ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದುದಾಗಿ ಹೇಳಿದ್ದಾನೆ.
ಶಾಲೆಯಲ್ಲಿ ತನ್ನನ್ನು ಇತರ ವಿದ್ಯಾರ್ಥಿಗಳು ಸಲಿಂಗಿ ಎಂದು ತಮಾಷೆ ಮಾಡುತ್ತಿದ್ದರು ಮತ್ತು ಹೆದರಿಸುತ್ತಿದ್ದರು. ನೀನು ಜಗತ್ತಿನಲ್ಲೇ ಬೆಸ್ಟ್ ಅಮ್ಮ. ನನಗಾಗಿ ಏನೆಲ್ಲಾ ಮಾಡಲು ಸಾಧ್ಯವೋ ಮಾಡಿದೆ. ಆದರೂ ನಾನು ಧೈರ್ಯವಂತನಾಗಲಿಲ್ಲ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.