Select Your Language

Notifications

webdunia
webdunia
webdunia
webdunia

ಹೆಂಡತಿ ಮೇಲಿನ ಅನುಮಾನಕ್ಕೆ ಕೊಂದೇ ಬಿಟ್ಟ ಪತಿ

ಆತ್ಮಹತ್ಯೆ
ಬೆಳಗಾವಿ: ಹೆಂಡತಿ ಮೇಲೆ ಅನುಮಾನದಿಂದ ಗಂಡ ಕುಡಿದ ಮತ್ತಿನಲ್ಲಿ ಆಕೆಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

15 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಇಬ್ಬರೂ ನೌಕರಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕುಡಿತದ ದಾಸನಾಗಿದ್ದ ಗಂಡ ಸಣ್ಣ ಪುಟ್ಟದ್ದಕ್ಕೆಲ್ಲಾ ಹೆಂಡತಿ ಮೇಲೆ ಅನುಮಾನಿಸಿ ಜಗಳ ತೆಗೆಯುತ್ತಿದ್ದ.

ಇದೇ ರೀತಿ ಈ ಬಾರಿಯೂ ಕುಡಿದ ನಶೆಯಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಕುಡಿದ ನಶೆ ಇಳಿದ ಮೇಲೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ. ಆದರೆ ಆಕೆಯ ದೇಹದ ಮೇಲಿನ ಗಾಯದ ಗುರುತಿನಿಂದ ಅನುಮಾನಗೊಂಡ ಮಹಿಳೆಯ ತವರಿನವರು ಪೊಲೀಸರಿಗೆ ದೂರು ನೀಡಿದ್ದರು. ಅದರಿಂದ ಪತಿಯ ನಾಟಕ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ!