Publish Date: Thu, 14 Feb 2019 (15:30 IST)
Updated Date: Thu, 14 Feb 2019 (15:36 IST)
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರ ಅಮರ್ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು, ಅಂಬಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಅಮರ್ ಸಿನಿಮಾದ ಟೀಸರ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಅಭಿಷೇಕ್ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ಅಭಿಷೇಕ್, ಅಂಬರೀಷ್, ಸುಮಲತಾ ಇರುವ ಬ್ಯಾನರ್‌ಗೆ ಹೂವಿನಿಂದ ಅಲಂಕಾರ ಮಾಡಿದ ಅಭಿಮಾನಿಗಳು, ನಂತರ ಹಾಲಿನ ಅಭಿಷೇಕ ಮಾಡಿದರು.
ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಅಂಬರೀಷ್ ಅವರಂತೆ ಅವರ ಮಗ ಅಭಿಷೇಕ್ ಕೂಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಾಧಿಸುತ್ತಾರೆ. ಅಮರ್ ಚಿತ್ರ ಸೂಪರ್ ಹಿಟ್ ಆಗೋದ್ರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು.