Select Your Language

Notifications

webdunia
webdunia
webdunia
webdunia

ಸಂಘದಿಂದ ಹಣ ದುರುಪಯೋಗ ಆರೋಪ

ಸಂಘದಿಂದ ಹಣ ದುರುಪಯೋಗ ಆರೋಪ
ಚಾಮರಾಜನಗರ , ಬುಧವಾರ, 21 ಜೂನ್ 2023 (14:00 IST)
ಚಾಮರಾಜನಗರದ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸದಸ್ಯರ ಚಿನ್ನಾಭರಣದ ಸಾಲ ನೀಡುವ ಮೂಲಕ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಚಾಮರಾಜನಗರ ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಶಿವಪ್ಪ, ಕಾರ್ಯದರ್ಶಿ ನಾಗೇಂದ್ರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಶೂನ್ಯ ಬಡ್ಡಿ ದರದಲ್ಲಿ ರೈತರ ಚಿನ್ನಾಭರಣದ ಮೇಲೆ ಸಾಲ ನೀಡುತ್ತೇವೆ ಎಂದು ಚಿನ್ನಾರಭರಣಗಳನ್ನು ಪಡೆದುಕೊಂಡು ಸಾಲ ನೀಡಿದ್ದು, ಮತ್ತೆ ಹಣ ಕಟ್ಟಿಸಿಕೊಂಡು ನಮ್ಮಚಿನ್ನಾಭರಣವನ್ನು ವಾಪಸ್ ನೀಡಲು ಹಿಂದೇಟು ಹಾಕಿದ್ದಾರೆ. ನಮ್ಮ ಚಿನ್ನಾಭರಣಗಳನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಲಿ ಸದಸ್ಯರು ಇತರೆ ಖಾಸಗಿ ಬ್ಯಾಂಕುಗಳನ್ನು ಇಟ್ಟು, ಹೆಚ್ಚಿನ ಹಣ ಪಡೆದು, ನಮ್ಮನ್ನು ವಂಚನೆ ಮಾಡಿದ್ದಾರೆ. ಈ ಕೂಡಲೇ ಇವರ ವಿರುದ್ದ ಕ್ರಿಮಿನಾಲ್ ಪ್ರಕರಣ ದಾಖಲು ಮಾಡಿ ನಮ್ಮ ಚಿನ್ನಾಭರಣವನ್ನು ಬಿಡಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಮುಕ್ತ ಕರ್ನಾಟಕ ಮಾಡುತ್ತೇವೆ: ಶಿವಕುಮಾರ್ ಶಪಥ