Select Your Language

Notifications

webdunia
webdunia
webdunia
webdunia

ಜಾಗದ ವಿಚಾರವಾಗಿ ಗಲಾಟೆ ಹಲ್ಲೆ ಆರೋಪ

ಜಾಗದ ವಿಚಾರವಾಗಿ ಗಲಾಟೆ ಹಲ್ಲೆ ಆರೋಪ
ವಿಜಯಪುರ , ಶನಿವಾರ, 10 ಜೂನ್ 2023 (19:33 IST)
ಸರ್ಕಾರಿ ಜಾಗದಲ್ಲಿ ಅಂಗಡಿ ಹಾಕಿಕೊಂಡವರ ಮೇಲೆ ಕಾಂಗ್ರೆಸ್​ ಮುಖಂಡ ಬಾಪುಗೌಡ ಪಾಟೀಲ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಪುಗೌಡ ಪಾಟೀಲ್ ಬೆಂಬಲಿಗರು ಮಲ್ಲಿಕಾರ್ಜುನ ಬಾಟಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಾಪುಗೌಡ ಪಾಟೀಲ್ ಸರ್ಕಾರಿ ಜಾಗದ ಬಳಿ ಎರಡು ಎಕರೆ ಜಮೀನು ಖರೀದಿಸಿದ್ದಾರೆ. ಸ್ಥಳೀಯರು ಸರ್ಕಾರಿ ಜಾಗದಲ್ಲಿ ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಹಲವರು ಅಂಗಡಿ, ಖಾನಾವಳಿ ಹಾಕಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಆದರೆ ಬಾಪುಗೌಡ ಪಾಟೀಲ್ ಮೊದಲಿಗೆ ಮಲ್ಲಿಕಾರ್ಜುನ ಬಟಗಿ ಅವರನ್ನು ಟಾರ್ಗೆಟ್ ಮಾಡಿ ಅಂಗಡಿ ಕಿತ್ತು ಹಾಕಿರೋ ಆರೋಪ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ದಾಟಿದ ಒಂಟಿ ಸಲಗ