Publish Date: Sat, 10 Jun 2023 (19:01 IST)
Updated Date: Sat, 10 Jun 2023 (19:04 IST)
ಕಾರವಾರದ ಬೊಮ್ಮನಹಳ್ಳಿ ಬಳಿ ಬೃಹತ್ ಗಾತ್ರದ ಒಂಟಿ ಸಲಗ ರಸ್ತೆ ದಾಟಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಗಜಗಾಂಭೀರ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ರಸ್ತೆ ದಾಟಿದೆ. ಬೃಹತ್ ಗಾತ್ರದ ಆನೆ ಕಂಡು ವಾಹನ ಸವಾರರು ರಸ್ತೆಯಲ್ಲಿ ನಿಂತಿದ್ದರು. ಆಹಾರ ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆನೆ ಸಾಗಿದೆ. ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳು ಆಗಾಗ ದರ್ಶನ ಕೊಡುತ್ತಿವೆ.