Webdunia - Bharat's app for daily news and videos

Install App

ಇದೊಂದು ಕಾರಣಕ್ಕೆ ನಮ್ಮಪ್ಪ ಸಿಎಂ ಆಗಬೇಕು ಎಂದಿದ್ದ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ

ಕೃಷ್ಣವೇಣಿ ಕೆ
ಮಂಗಳವಾರ, 2 ಜೂನ್ 2026 (17:01 IST)
ಬೆಂಗಳೂರು: ಇದೊಂದು ಕಾರಣಕ್ಕೆ ನಮ್ಮಪ್ಪ ಸಿಎಂ ಆಗಬೇಕು ಎಂದು ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಡಿಕೆ ಸುವರ್ಣ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದ್ದರು. ಅದೀಗ ನಿಜವಾಗುತ್ತಿದೆ.

ಡಿಕೆ ಶಿವಕುಮಾರ್ ನಾಳೆ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿಎಂ ಆಗುವುದು ಅವರ ಬಹುದಿನಗಳ ಕನಸಾಗಿತ್ತು. ಅವರ ಪಕ್ಷ ನಿಷ್ಠೆಗೆ ಈಗ ಫಲ ಸಿಕ್ಕಿದೆ.  ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಮಹಿಳಾ ದಿನಾಚರಣೆ ಪ್ರಯುಕ್ತ ಸುವರ್ಣ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಡಿಕೆಶಿ ಮಗಳು ಐಶ್ವರ್ಯಾ ನಮ್ಮಪ್ಪ ಯಾಕೆ ಸಿಎಂ ಆಗಬೇಕು ಎಂದು ಹೇಳಿದ್ದರು. ಅವರು ರಾಜಕೀಯಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಒಂದು ದಿನ ನಾವು ಫ್ಯಾಮಿಲಿ ಟೂರ್ ಹೋಗಿದ್ದಿಲ್ಲ. ಒಮ್ಮೆ ಹೋಗಿದ್ದರೂ ಕೆಲಸದ ನಿಮಿತ್ತ ಹೋಗಿ ವಾಪಸ್ ಬಂದಿದ್ದೆವು.

ಅವರು ಜೈಲಿನಿಂದ ಹೊರಬಂದ ತಕ್ಷಣ ಕುಟುಂಬದವರನ್ನು ನೋಡಲು ಬರಲಿಲ್ಲ. ಅವರನ್ನು ಪ್ರೀತಿಸುವ ಜನರನ್ನು ನೋಡಲು ಹೋದರು. ನಾನು ಜೈಲಿಗೆ ಹೋಗಿದ್ದಾಗ ಇದೇ ಜನರು ಚಪ್ಪಲಿಯಿಲ್ಲದೇ ಪ್ಲೇನ್ ಹತ್ತಿದ್ದಾರೆ, ನನಗಾಗಿ ಜೈಲಿನ ಹೊರಗೆ ಊಟ ಇಲ್ಲದೇ ಕಾದು ನಿಂತಿದ್ದಾರೆ. ಅವರನ್ನು ಬಿಟ್ಟು ನಾನು ಕುಟುಂಬದವರನ್ನು ನೋಡಲು ಹೇಗೆ ಬರಲಿ ಎಂದಿದ್ದರು. ಅವರ ತ್ಯಾಗಕ್ಕಾದರೂ ಅವರು ಒಮ್ಮೆ ಸಿಎಂ ಆಗಲೇಬೇಕು ಎಂದಿದ್ದರು. ಅದೀಗ ನಿಜವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ 300 ಅಡಿಗಳಷ್ಟು ಕುಸಿದ ಕೇಸ್‌, ತನಿಖೆಯಲ್ಲಿ ಊಹಿಸಲಾಗದ ತಿರುವು

ಚಲಿಸುತ್ತಿದ್ದ ರೈಲಿನ ಟಯರ್‌ಗೆ ಸಿಲುಕಿ ಇನ್ನೇನು ಪ್ರಾಣಕ್ಕೆ ಅಪಾಯವಾಗುತ್ತೆ ಅನ್ನುವಷ್ಟ್ರಲ್ಲಿ ರಕ್ಷಿಸಿದ ರೈಲ್ವೆ ಪಾಯಿಂಟ್ಸ್‌ಮ್ಯಾನ್, Video

ವಂದೇ ಮಾತರಂಗೆ ಅಪಮಾನಿಸಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ, ಹಾಕಿದ್ರೆ ಶಿಕ್ಷೆಯೇನು ಗೊತ್ತಾ

ನಶೆಮುಕ್ತ ರಾಜ್ಯವನ್ನಾಗಿಸುವ ಸಿಎಂ ಆಶಯವನ್ನು ಸಾಕಾರಗೊಳಿಸುವ ಜವಾಬ್ದಾರಿ ಪೊಲೀಸ ಇಲಾಖೆ ಮೇಲಿದೆ

ನಾಗೇಂದ್ರ ರಾಜೀನಾಮೆ ನೀಡುವವರೆಗೆ ಅಧಿವೇಶನ ನಡೆಯಲು ಅವಕಾಶ ನೀಡಲ್ಲ: ಆರ್‌ ಅಶೋಕ್ ಎಚ್ಚರಿಕೆ

ಮುಂದಿನ ಸುದ್ದಿ
Show comments