Webdunia - Bharat's app for daily news and videos

Install App

ಮಾರ್ಚ್ 30ರ ನಂತರ ಕಾಂಗ್ರೆಸ್ ‌ಸೇರ್ಪಡೆ ಆಗ್ತೀನಿ- ಗುಬ್ಬಿ ಶ್ರೀನಿವಾಸ್

Webdunia
ಸೋಮವಾರ, 27 ಮಾರ್ಚ್ 2023 (14:27 IST)
ರಾಜೀನಾಮೆ ಬಳಿಕ ಗುಬ್ಬಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು,20 ವರ್ಷ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದೆ.ಪಕ್ಷ ಬಿಡೋಕೆ ನೋವಾಗುತ್ತಿದೆ.ನಾನು ಪಕ್ಷ ಬಿಡೋ ಯೋಚನೆ ‌ಮಾಡಿರಲಿಲ್ಲ.2021 ರಲ್ಲಿ ಕುಮಾರಸ್ವಾಮಿ ನನ್ನ ವಿರುದ್ದ ಅಭ್ಯರ್ಥಿ ಘೋಷಣೆ ಮಾಡಿದ್ರು.ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಗುಬ್ಬಿ ಶ್ರೀವಾಸ್ ಹೇಳಿದ್ದಾರೆ.
 
ಇನ್ನೂ ಸ್ಪೀಕರ್ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದಾರೆ.ದೇವೇಗೌಡರು, ಕುಮಾರಸ್ವಾಮಿ ಜೊತೆ ಉತ್ತಮ ಸಂಬಂಧ ಇತ್ತು.ಅಣ್ಣ ತಮ್ಮನ ರೀತಿ ಇದ್ದೆವು.ಯಾರು ಏನ್ ಹೇಳಿದ್ರೋ ಗೊತ್ತಿಲ್ಲ. ನನ್ನ ವಿರುದ್ಧ ಅಭ್ಯರ್ಥಿ ಘೋಷಣೆ ಮಾಡಿದ್ರು.ವಿಧಿ ಇಲ್ಲದೆ ರಾಜೀನಾಮೆ ಕೊಟ್ಟಿದೇನೆ.ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳ್ತೀನಿ.ರೇವಣ್ಣಗೂ ಧನ್ಯವಾದ ಹೇಳ್ತೀನಿ.ಕಾಂಗ್ರೆಸ್ ‌ಸೇರ್ಪಡೆ ಆಗ್ತೀನಿ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡ್ತೀನಿ.ಗುಬ್ಬಿಯಲ್ಲಿ ನಾನು ಇದ್ದ ದಿನವೇ ಕುಮಾರಸ್ವಾಮಿ ಅಭ್ಯರ್ಥಿ ಮಾಡಿದ್ರು.ಪಕ್ಷದಲ್ಲಿ ಮಾನ್ಯತೆ ಇಲ್ಲದೆ ಹೋದ್ರೆ ಹೇಗೆ ಇರೋದು.ಭಾರದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿದ್ದೇನೆ.ಕ್ರಾಸ್ ಓಟಿಂಗ್ ನಾನು ಮಾಡಿಲ್ಲ.ಕುಮಾರಸ್ವಾಮಿಗೆ ಕ್ರಾಸ್ ಓಟಿಂಗ್ ಬಗ್ಗೆ ಸ್ಪಷ್ಟತೆ ಇಲ್ಲ. ಏನೇನೋ ಹೇಳಿಕೆ ಕೊಡ್ತಾರೆ.ಜಿಡಿ ದೇವೇಗೌಡರ ವಿರುದ್ದ ಅಷ್ಟೆಲ್ಲ ಮಾತಾಡಿದ್ರು. ಅಮೇಲೆ  ದೇವೇಗೌಡ, ಕುಮಾರಸ್ವಾಮಿ ರಾಜೀ ಮಾಡಿದ್ರು.ನಾನು ಪಕ್ಷ ಬಿಡೊಲ್ಲ ಅಂದ್ರು ಯಾರು ಬಂದು ನನ್ನ ಬಳಿ ಮಾತಾಡಲಿಲ್ಲ.ನನ್ನನ್ನ ಯಾರು ಕರೆದು ಮಾತಾಡಲಿಲ್ಲ.ಬೇರೆ ಯಾರು ಪಕ್ಷ ಬಿಡ್ತಾರೋ ಗೊತ್ತಿಲ್ಲ.ಮಾರ್ಚ್ 30ರ ನಂತರ ಕಾಂಗ್ರೆಸ್ ‌ಸೇರ್ಪಡೆ ಆಗ್ತೀನಿ.ನನ್ನ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ.100% ಕಾಂಗ್ರೆಸ್ ನಿಂದ ಗೆಲ್ತೀನಿ ಎಂದು ಗುಬ್ಬಿ ಶ್ರೀನಿವಾಸ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments