Select Your Language

Notifications

webdunia
webdunia
webdunia
webdunia

ತಮಿಳುನಾಡು ಬಳಿಕ ಕರ್ನಾಟಕದಲ್ಲೂ ಬದಲಾಗುತ್ತಾ ರೂಪಾಯಿ ಚಿಹ್ನೆ: ಇದು ಸರೀನಾ

Kannada RS

Krishnaveni K

ಬೆಂಗಳೂರು , ಶನಿವಾರ, 15 ಮಾರ್ಚ್ 2025 (10:45 IST)
Photo Credit: X
ಬೆಂಗಳೂರು: ಕೇಂದ್ರದ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಡಿಎಂಕೆ ತಮಿಳುನಾಡು ಬಜೆಟ್ ನಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳುಭಾಷೆಯಲ್ಲೇ ಹಾಕಿಕೊಂಡಿತ್ತು. ಇದೀಗ ಕರ್ನಾಟಕದಲ್ಲೂ ಬದಲಾವಣೆಯಾಗುತ್ತಾ ಎಂಬ ಅನುಮಾನ ಮೂಡಿದೆ.

ಕೇಂದ್ರದ ವಿರುದ್ಧ ತಿರುಗಿ ಬಿದ್ದಿರುವ ಡಿಎಂಕೆ, ಒಂದು ಕಾಲದಲ್ಲಿ ತನ್ನದೇ ಪಕ್ಷದ ನಾಯಕ ಅನುಮೋದಿಸಿದ್ದ ರೂಪಾಯಿ ಚಿಹ್ನೆಯನ್ನು ಬಹಿಷ್ಕರಿಸಿ ತಮಿಳಿನಲ್ಲಿಯೇ ರೂಪಾಯಿ ಚಿಹ್ನೆ ಬರೆದುಕೊಂಡಿತ್ತು. ಇದು ಹಿಂದಿ ಹೇರಿಕೆ ಎನ್ನುವುದು ಡಿಎಂಕೆ ವಾದವಾಗಿದೆ.

ಇದೀಗ ಕರ್ನಾಟಕದಲ್ಲೂ ಬದಲಾವಣೆಯಾಗಬೇಕು ಎಂದು ಕೆಲವು ಕನ್ನಡ ಪರ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ನಮಗೆ ಹಿಂದಿ ಬೇಡ, ಕನ್ನಡ ಅದಕ್ಕಿಂತಲೂ ಹಳೆಯ ಭಾಷೆ. ಕನ್ನಡದಲ್ಲೇ ರೂ. ಚಿಹ್ನೆ ಬಳಸೋಣ ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಡಿಎಂಕೆ ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಈಗ ಕರ್ನಾಟಕದಲ್ಲೂ ಸರ್ಕಾರವೇ ರೂಪಾಯಿ ಚಿಹ್ನೆ ಕನ್ನಡಕ್ಕೆ ಬದಲಾವಣೆ ಮಾಡುತ್ತಾ ನೋಡಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಅಮಲಿನಲ್ಲಿ ಮಹಿಳೆಗೆ ಢಿಕ್ಕಿ ಹೊಡೆದು ಸಾಯಿಸಿದ ವಡೋದರಾ ಯುವಕ ನೀಡಿದ ಕಾರಣ ಕೇಳಿದ್ರೆ ಶಾಕ್