Daily Horoscope

Select Your Language

Notifications

webdunia
webdunia
webdunia
webdunia

100 ವರ್ಷಗಳ ಬಳಿಕ ಆರ್‌ಎಸ್‌ಎಸ್ ಕಾನೂನು ಪಾಲಿಸಿದೆ: ಪ್ರಿಯಾಂಕ್ ಖರ್ಗೆ

priyank Kharge
ಕಲಬುರಗಿ: ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, 100 ವರ್ಷಗಳಲ್ಲಿ ಮೊದಲ ಬಾರಿಗೆ ಚಿತ್ತಾಪುರದಲ್ಲಿ ಕಾನೂನು ಮತ್ತು ಸಾಂವಿಧಾನಿಕ ಅನುಮತಿಯೊಂದಿಗೆ ಪಥಸಂಚಲನ ನಡೆಸುವ ಮೂಲಕ ನಿಯಮಗಳನ್ನು ಪಾಲಿಸುತ್ತಿದೆ ಎಂದರು.

ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರವಾದ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಪಥಸಂಚಲನ ನಡೆಸುತ್ತಿದೆ.

ನಾನು ಎಂದಿಗೂ ಪಥಸಂಲನವನ್ನು ವಿರೋಧಿಸಿಲ್ಲ. ನಾನು ಹೇಳಿದ್ದು ಅನುಮತಿ ಪಡೆಯಬೇಕು ಎಂದು ಮಾತ್ರ. ಅವರಿಗೆ ಕಾನೂನಿನ ನಿಯಮವನ್ನು ಪಾಲಿಸದಿರುವ ಅಭ್ಯಾಸವಿದೆ. ಇದೀಗ ಅವರು ಕಾನೂನು ನಿಯಮ ಮೂಲಕ ಪಾಲಿಸುತ್ತಿದ್ದಾರೆ ಎಂದು  ಹೇಳಿದರು. 

ನಾವು ಅವರನ್ನು ಕಾನೂನು ಮತ್ತು ಸಂವಿಧಾನವನ್ನು ಪಾಲಿಸುವಂತೆ ಕೇಳಿಕೊಂಡಿದ್ದೇವೆ. ಅದನ್ನು ಅವರು 100 ವರ್ಷಗಳಲ್ಲಿ ಮೊದಲ ಬಾರಿಗೆ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ